ನವದೆಹಲಿ:ಗೂಗಲ್ ಪೇ (ಜಿಪಿ) ಮೊಬೈಲ್ ಅಪ್ಲಿಕೇಷನ್ ನಿರ್ವಹಣೆಯಲ್ಲಿ ಗೂಗಲ್ ಇಂಡಿಯಾ ಡಿಜಿಟಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ಗೆ ಆಧಾರ್ ಡೇಟಾಬೇಸ್ ಸೇರಿದಂತೆ ಇತರೆ ಯಾವುದೇ ಮಾಹಿತಿ ಅಗತ್ಯವಿಲ್ಲ ಎಂದು ಕಂಪನಿಯು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರಿದ್ದ ನ್ಯಾಯಪೀಠದ ಮುಂದೆ ಸಲ್ಲಿಸಲಾದ ಹೆಚ್ಚುವರಿ ಅಫಿಡವಿಟ್‌ನಲ್ಲಿ ವಿಚಾರಣೆ ನಡೆಸಿತ್ತು. ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಜಿಪೆಗೆ ಪ್ರವೇಶಕ್ಕೆ ಭಾರತದ ವಿಶಿಷ್ಟ ಗುರುತಿಸುವಿಕೆ ಪ್ರಾಧಿಕಾರದ (ಯುಐಡಿಎಐ) ಭೀಮ್ ಆಧಾರ್ ಪ್ಲಾಟ್ಫಾರ್ಮ್ಗೆ ಅನುಮತಿಸಿದೆ.
ಪ್ರತಿವಾದಿ 2 (ಜಿಪಿ) ಸಂಪೂರ್ಣವಾಗಿ ಪ್ರತ್ಯೇಕ ಪ್ರೊಡಕ್ಟ್ ಆದ ಭೀಮ್ ಆಧಾರ್‌ಗೆ ಸಂಪರ್ಕ ಹೊಂದಿಲ್ಲ ಎಂದು ಹೇಳಿದೆ.