ನವದೆಹಲಿ: ರಾಜ್ಯ ನೌಕರರ ವಿಮಾ ನಿಗಮವು (ಇಎಸ್ಐಸಿ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಇಎಸ್ಐ ಫಲಾನುಭಾವಿಯ ಚಿಕಿತ್ಸಾ ವೆಚ್ಚವು ಮಧ್ಯಸ್ಥಗಾರರ ಹಾಗೂ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ಹಣ ವರ್ಗಾಯಿಸುವ ಒಮ್ಮತವನ್ನು ತೆಗೆದುಕೊಂಡಿವೆ.
ಮಂಗಳವಾರ ಐಎಸ್ಐಸಿ- ಎಸ್‌ಬಿಐ ಸಹಿ ಹಾಕಿದ ಒಪ್ಪಂದದ ಅನ್ವಯ, ಎಸ್‌ಬಿಐ ಇ- ಪಾವತಿ ಸೇವೆಯನ್ನು ಎಲ್ಲ ಇಎಸ್‌ಐಸಿ ಫಲಾನುಭವಿಗಳಿಗೆ ಮತ್ತು ಬ್ಯಾಂಕ್ ಖಾತೆಗಳಿಗೆ ಯಾವುದೇ ಹಸ್ತಕ್ಷೇಪವಿಲ್ಲದೆ ಏಕೀಕೃತ ಮತ್ತು ಸ್ವಯಂಚಾಲಿತ ಪ್ರಕ್ರಿಯೆ ಅಡಿ ನೇರ ಹಣ ವರ್ಗಾವಣೆ ಆಗಲಿದೆ ಎಂದು ಇಎಸ್‌ಐಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನಗದು ನಿರ್ವಹಣಾ ಪ್ರಕ್ರಿಯೆಯನ್ನು ಇ- ಪಾವತಿ ತಂತ್ರಜ್ಞಾನ ಮುಖೇನ ಬ್ಯಾಂಕ್ ಮತ್ತು ಇಎಸ್ಐಸಿ ಯೋಜನಾ ನಿರ್ವಹಣೆಯ ನಡುವೆ ನಡೆಯಲಿದೆ. ಏಕಮುಖ ಇ- ಪಾವತಿಯು ಇಎಸ್ಐಸಿ ಫಲಾನುಭವಿಗಳಿಗೆ ಹಾಗೂ ಪಾವತಿದಾರರಿಗೆ ಕಾನೂನು ಬದ್ಧವಾದ ಲಾಭ ಪಡೆಯಲು ನೆರವಾಗಲಿದೆ. ನೈಜ ಸಮಯದ ಆಧಾರದ ಮೇಲೆ ಸೇವೆ ಲಭ್ಯವಾಗುವುದರಿಂದ ಸಮಯದ ವಿಳಂಬ ತಪ್ಪಿಸಲಿದೆ. ಪುನರಾವರ್ತಿತ ಮತ್ತು ಹಸ್ತಚಾಲಿತ ಡೇಟಾ ಭರ್ತಿಯಿಂದ ಉಂಟಾಗುವ ತಪ್ಪು ಹಾಗೂ ದೋಷಗಳನ್ನು ತೆಗೆದುಹಾಕಲು ನೆರವಿಗೆ ಬರಲಿದೆ.