ನವದೆಹಲಿ:ಡಿಸ್ನಿ ತನ್ನ ಸ್ಟ್ರೀಮಿಂಗ್ ಸೇವೆಯಾದ ಡಿಸ್ನಿ ಪ್ಲಸ್ (ಡಿಸ್ನಿ), ಹಾಟ್‌ಸ್ಟಾರ್ ಮೂಲಕ ಜನಪ್ರಿಯ ಆನ್ ಡಿಮಾಂಡ್ ವಿಡಿಯೋ ಪ್ಲಾಟ್‌ಫಾರ್ಮ್ ಮೂಲಕ ಭಾರತೀಯ ಮನೋರಂಜನೆ ಕ್ಷೇತ್ರಕ್ಕೆ ಲಗ್ಗೆ ಇಡಲಿದ್ದು, ವಾರ್ಷಿಕ ಶುಲ್ಕ 399 ರೂ. ನಿಗದಿಪಡಿಸಿದೆ.
ಡಿಸ್ನಿ ಹಾಟ್‌ಸ್ಟಾರ್ ಎಂದು ಕರೆಯಲ್ಪಡುವ ಸ್ಟ್ರೀಮಿಂಗ್ ಸೇವೆಯ ಚಂದಾದಾರರು ಇಂಗ್ಲಿಷ್ ಮತ್ತು ಹಲವು ಸ್ಥಳೀಯ ಭಾಷೆಗಳಲ್ಲಿ ಲೈವ್ ಕ್ರೀಡಾಕೂಟಗಳು, ಟಿವಿ ಚಾನೆಲ್, ಸಿನಿಮಾ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು ಎಂದು ಟೆಕ್ಕ್ರಂಚ್ ವರದಿ ಮಾಡಿದೆ.
ಚಂದಾದಾರರು "ಅವೆಂಜರ್ಸ್", "ಐರನ್ ಮ್ಯಾನ್", "ಥಾರ್ ರಾಗ್ನಾರೊಕ್"ನಂತಹ ಅತ್ಯುತ್ತಮ ಸೂಪರ್ ಹೀರೊ ಚಲನಚಿತ್ರಗಳನ್ನೂ "ದಿ ಲಯನ್ ಕಿಂಗ್", "ಫ್ರೋಜನ್ II", "ಅಲ್ಲಾದೀನ್" ಸೇರಿದಂತೆ ಇತ್ತೀಚಿನ ಸಿನಿಮಾಗಳನ್ನು ವೀಕ್ಷಿಸಬಹುದು. ಟಾಯ್ ಸ್ಟೋರಿ 4, ಮಿಕ್ಕಿ ಮೌಸ್, ಗಜ್ಜು ಭಾಯ್, ಡೊರೊಮನ್ ಮತ್ತು ಶಿನ್-ಚಾನ್ ನಂತಹ ಕಾರ್ಟೂನ್ ಸಹ ನೋಡಬಹುದು.
ವೀಕ್ಷಕರು ಮೂರು ವಿಭಿನ್ನ ರೀತಿಯ ಆಯ್ಕೆ ಮಾಡಬಹುದು. 1/2 ಡಿಸ್ನಿ + ಹಾಟ್‌ಸ್ಟಾರ್ ವಿಐಪಿ , ಡಿಸ್ನಿ + ಹಾಟ್‌ಸ್ಟಾರ್ ಪ್ರೀಮಿಯಂ ಮತ್ತು ಜಾಹೀರಾತು ಬೆಂಬಲಿತ ಮೂಲ ಶ್ರೇಣಿ ಒಳಗೊಂಡಿದೆ.
ಡಿಸ್ನಿ ಹಾಟ್‌ಸ್ಟಾರ್ + ಪ್ರೀಮಿಯಂನ ಚಂದಾದಾರರು ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಮತ್ತು 29 ಡಿಸ್ನಿ ಒರಿಜಿನಲ್ಸ್‌ನ ಎಲ್ಲ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ಜಾನ್ ಫಾವ್ರೂ ಅವರ "ದಿ ಮ್ಯಾಂಡಲೋರಿಯನ್"; "ಹೈಸ್ಕೂಲ್ ಮ್ಯೂಸಿಕಲ್: ದಿ ಮ್ಯೂಸಿಕಲ್: ದಿ ಸೀರೀಸ್", "ಲೇಡಿ ಆ್ಯಂಡ್ ದಿ ಟ್ರ್ಯಾಂಪ್"ನ ಲೈವ್-ಆಕ್ಷನ್ ಆವೃತ್ತಿ ಮತ್ತು ಎಚ್‌ಬಿಒ, ಫಾಕ್ಸ್, ಶೋಟೈಮ್‌ನಂತಹ ಸ್ಟುಡಿಯೋಗಳ ಇತ್ತೀಚಿನ ಅಮೆರಿಕದ ಕಾರ್ಯಕ್ರಮಗಳು ಸೇರಿವೆ. ಇದರ ವಾರ್ಷಿಕ ಚಂದಾದಾರಿಕೆ 1,499 ರೂ. ನಿಗದಿಪಡಿಸಲಾಗಿದೆ.
ಭಾಷೆ ಆಧಾರಿತ ಚಂದಾದಾರಿಕೆ ಅಡಿ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರರು ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ವೀಕ್ಷಿಸಬಹುದು. ಅಸ್ತಿತ್ವದಲ್ಲಿರುವ ಎಲ್ಲ ಚಂದಾದಾರರನ್ನು ಸ್ವಯಂಚಾಲಿತವಾಗಿ ಆಯಾ ಹೊಸ ಚಂದಾದಾರಿಕೆ ಯೋಜನೆಗೆ ಅಪ್‌ಗ್ರೇಡ್ ಮಾಡಲಾಗುತ್ತದೆ ಮತ್ತು ನವೀಕರಣದ ನಂತರ ಹೊಸ ದರಗಳನ್ನು ವಿಧಿಸಲಾಗುತ್ತದೆ.