ಕರ್ನಾಟಕ

karnataka

By

Published : May 24, 2021, 2:59 PM IST

ETV Bharat / business

ಪತಂಜಲಿ ಡೈರೀಸ್‌ ಸಿಇಒ ಕೋವಿಡ್​ ಸೋಂಕಿಗೆ ಬಲಿ

ಅಲೋಪತಿ ಔಷಧಗಳನ್ನು ತೆಗೆದುಕೊಂಡ ಲಕ್ಷಾಂತರ ಮಂದಿ ಈವರೆಗೆ ಸಾವನ್ನಪ್ಪಿದ್ದಾರೆ. ಡಿಸಿಜಿಐ ಅನುಮೋದನೆ ನೀಡಿರುವ ಔಷಧಗಳಾದ ಫ್ಯಾವಿಫ್ಲೂ ಸೇರಿದಂತೆ ಇತರೆ ಔಷಧಗಳು ಕೋವಿಡ್-19 ಚಿಕಿತ್ಸೆಯಲ್ಲಿ ವಿಫಲವಾಗಿವೆ ಎಂದು ಬಾಬಾ ರಾಮ್ ದೇವ್ ಅವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಪತಂಜಲಿ ಡೈರೀಸ್​ ಸಿಇಒ ಕೋವಿಡ್​ ಸೋಂಕಿಗೆ ಬಲಿಯಾಗಿದ್ದಾರೆ.

CEO of Patanjali Dairies
CEO of Patanjali Dairies

ಜೈಪುರ: ಕೋವಿಡ್ -19 ಸಂಬಂಧಿತ ತೊಂದರೆಗಳಿಂದಾಗಿ ಯೋಗ ಗುರು ಬಾಬಾ ರಾಮ್​ದೇವ್ ಅವರ ಪತಂಜಲಿ ಆಯುರ್ವೇದ ಡೈರಿ ಬ್ಯುಸಿನೆಸ್ ಸಿಇಒ ಸುನಿಲ್ ಬನ್ಸಾಲ್ ನಿಧನರಾದರು.

ಅಲೋಪತಿ ಔಷಧಗಳನ್ನು ತೆಗೆದುಕೊಂಡ ಲಕ್ಷಾಂತರ ಮಂದಿ ಈವರೆಗೆ ಸಾವನ್ನಪ್ಪಿದ್ದಾರೆ. ಡಿಸಿಜಿಐ ಅನುಮೋದನೆ ನೀಡಿರುವ ಔಷಧಗಳಾದ ಫ್ಯಾವಿಫ್ಲೂ ಸೇರಿದಂತೆ ಇತರೆ ಔಷಧಗಳು ಕೋವಿಡ್-19 ಚಿಕಿತ್ಸೆಯಲ್ಲಿ ವಿಫಲಗೊಂಡಿವೆ ಎಂದಿದ್ದ ಬಾಬಾ ರಾಮ್ ದೇವ್ ಅವರ ಹೇಳಿಕೆ ವ್ಯಾಪಕ ಟೀಕೆಗೆ ಒಳಗಾಗಿತ್ತು.

ಮೇ 19ರಂದು ಬನ್ಸಾಲ್ ನಿಧನರಾದರೂ ರಾಮದೇವ್ ಅಲೋಪತಿ ಔಷಧಿಗಳು ಮತ್ತು ಕೋವಿಡ್ ಬಗ್ಗೆ ನೀಡಿದ ಹೇಳಿಕೆಗಳ ಬಗ್ಗೆ ವಿವಾದ ಎದುರಿಸುತ್ತಿರುವ ಸಮಯದಲ್ಲಿ ಅವರ ಸಾವು ಮುಂಚೂಣಿಗೆ ಬಂದಿದೆ.

57 ವರ್ಷದ ಬನ್ಸಾಲ್ ತೀವ್ರ ಶ್ವಾಸಕೋಶದ ಹಾನಿ, ಕೋವಿಡ್ -19 ಮತ್ತು ಮೆದುಳಿನ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಜೈಪುರದ ಆಸ್ಪತ್ರೆ ತಿಳಿಸಿದೆ.

ಡೈರಿ ವಿಜ್ಞಾನದಲ್ಲಿ ತಜ್ಞರಾದ ಬನ್ಸಾಲ್ ಅವರು 2018ರಲ್ಲಿ ಪತಂಜಲಿಯ ಡೈರಿ ವ್ಯವಹಾರದ ಉಸ್ತುವಾರಿ ವಹಿಸಿಕೊಂಡರು. ಈ ವ್ಯವಹಾರವನ್ನು ಸುಗಮವಾಗಿ ನಡೆಸುತ್ತಿದ್ದರು.

ABOUT THE AUTHOR

...view details