ಕರ್ನಾಟಕ

karnataka

ETV Bharat / business

ಕಾಫಿ ಡೇ 'ಮಾಲೀಕತ್ವ'ದ ಮೇಲೆ ಕಣ್ಣಿಟ್ಟಿದ್ದ'ಕೋಕಾ ಕೋಲಾ'ಗೆ ಷೇರು ಮಾರಾಟ!

ವಿ ಜಿ ಸಿದ್ಧಾರ್ಥ್​ ಅವರು ಸಾವಿಗೀಡಾಗುವ ಮೊದಲೇ ಕೋಕಾಕೋಲಾ ಜೊತೆಗೆ ಮಾತುಕತೆಯನ್ನು ಆರಂಭಿಸಿದ್ದರು. ಒಂದಿಷ್ಟು ಷೇರುಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಸಾಲ ಮರುಪಾವತಿಸುವ ಯೋಜನೆ ಅವರದಾಗಿತ್ತು. ಆದರೆ, ಕೋಕಾಕೋಲಾ ಕಂಪನಿಯ ಮಾಲೀಕತ್ವದ ಮೇಲೆ ಕಣ್ಣಿಟ್ಟಿದ್ದರಿಂದ ಮಾತುಕತೆ ಅರ್ಧದಲ್ಲೇ ನಿಂತು ಹೋಗಿತ್ತು.

ಸಾಂದರ್ಭಿಕ ಚಿತ್ರ

By

Published : Aug 20, 2019, 6:33 PM IST

ನವದೆಹಲಿ: ತೀವ್ರ ಸಾಲದ ಹೊರೆಯಿಂದ ನಲುಗುತ್ತಿರುವ ಕೆಫೆ ಕಾಫಿ ಡೇ ತನ್ನ ಆರ್ಥಿಕ ಹೊರೆಯಿಂದ ಹೊರಬರಲು ಬೆಂಗಳೂರಿನ ಗ್ಲೋಬಲ್​ ಐಟಿ ಕೇಂದ್ರ ಮಾರಾಟದ ಮಾತುಕತೆಯ ಬಳಿಕ ಷೇರುಗಳ ಮಾರಾಟಕ್ಕೆ ಚಿಂತಿಸುತ್ತಿದೆ.

ತಂಪುಪಾನೀಯ ಕ್ಷೇತ್ರದ ದಿಗ್ಗಜ ಕೋಕಾ ಕೋಲಾಗೆ ಕೆಫೆ ಷೇರುಗಳನ್ನು ಮಾರಾಟ ಮಾಡುವ ಕುರಿತು ಕಾಫಿ ಡೇ ಮತ್ತೆ ಮಾತುಕತೆ ಆರಂಭಿಸುವ ಸಾಧ್ಯತೆ ಇದೆ.ವಿ.ಜಿ. ಸಿದ್ಧಾರ್ಥ್​ ಅವರು ಸಾವಿಗೀಡಾಗುವ ಮೊದಲೇ ಕೋಕಾಕೋಲಾ ಜೊತೆಗೆ ಮಾತುಕತೆಯನ್ನು ಆರಂಭಿಸಿದ್ದರು. ಒಂದಿಷ್ಟು ಷೇರುಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಸಾಲ ಮರುಪಾವತಿಸುವ ಯೋಜನೆ ಅವರದಾಗಿತ್ತು. ಆದರೆ, ಕೋಕಾಕೋಲಾ ಕಂಪನಿ ಮಾಲೀಕತ್ವದ ಮೇಲೆ ಕಣ್ಣಿಟ್ಟಿದ್ದರಿಂದ ಮಾತುಕತೆ ಅರ್ಧದಲ್ಲೇ ನಿಂತು ಹೋಗಿತ್ತು.

ಇದರ ಜೊತೆಗೆ ಸಿದ್ಧಾರ್ಥ್​ ಅವರ ಸ್ಥಾಪಿಸಿದ್ದ ಸರಕು ಸಾಗಣೆ ಕಂಪನಿ ಸಿಕಲ್​ ಲಾಜಿಸ್ಟಿಕ್​ನ ಕೆಲವು ಆಸ್ತಿಗಳ ಮಾರಾಟಕ್ಕೆ ಕೆಫೆ ಕಾಫಿ ಡೇ ಸಿದ್ಧವಾಗಿದೆ ಎಂದು ವರದಿಗಳು ಹರಿದಾಡುತ್ತಿವೆ.

ABOUT THE AUTHOR

...view details