ಕರ್ನಾಟಕ

karnataka

ETV Bharat / business

ರಫೇಲ್​ ಪ್ರಕಟಣೆ ಬಳಿಕ ಅನಿಲ್​ ಅಂಬಾನಿ ಕಂಪನಿಗೆ 1,100 ಸಾವಿರ ಕೋಟಿ ರೂ. ತೆರಿಗೆ ಕಟ್​..!

ನಾವೇನೂ ತಪ್ಪು ಮಾಡಿಲ್ಲ, ಕಾನೂನಿನ ಚೌಕಟ್ಟಿನ ವ್ಯಾಪ್ತಿಯೊಳಗೆ ನಮ್ಮ ತೆರಿಗೆ ವಿವಾದ ಇತ್ಯರ್ಥ ಪಡಿಸಿಕೊಂಡಿದ್ದೇವೆ. ಫ್ರಾನ್ಸ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಕಂಪನಿಗಳಿಗೂ ಈ ರೀತಿಯ ಸೌಲಭ್ಯ ಸಿಗುತ್ತಿದೆ: ರಿಲಯನ್ಸ್​ ಕಮ್ಯುನಿಕೇಷನ್ಸ್​

ಸಾಂದರ್ಭಿಕ ಚಿತ್ರ

By

Published : Apr 13, 2019, 6:49 PM IST

ನವದೆಹಲಿ:ಭಾರತ ಫ್ರೆಂಚ್​ನಿಂದ 36 ರಫೇಲ್​ ಜೆಟ್​ ವಿಮಾನ ಖರೀದಿಯ ಒಪ್ಪಂದ ಅಂತಿಮಗೊಳಿಸಿ ಪ್ರಕಟಣೆ ಹೊರಡಿಸಿದ ಬಳಿಕ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್​ ಕಮ್ಯುನಿಕೇಷನ್ಸ್​ನ ಫ್ರಾನ್ಸ್​​ ನೋಂದಾಯಿತ ಟೆಲಿಕಾಂ ಉಪ ಸಂಸ್ಥೆಗೆ ₹ 11 ಸಾವಿರ ಕೋಟಿ (143.7 ದಶಲಕ್ಷ ಯೂರೋ) ತೆರಿಗೆ ಮೊತ್ತ ವಿನಾಯಿತಿ ನೀಡಲಾಗಿತ್ತು ಎಂದು ಫ್ರಾನ್ಸ್​ನ ಸ್ಥಳೀಯ ಮಾಧ್ಯಮ ಪ್ರಕಟಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ರಿಲಯನ್ಸ್​ ಕಮ್ಯುನಿಕೇಷನ್ಸ್​, ' ನಾವೇನೂ ತಪ್ಪು ಮಾಡಿಲ್ಲ, ಕಾನೂನಿನ ಚೌಕಟ್ಟಿನ ವ್ಯಾಪ್ತಿಯೊಳಗೆ ನಮ್ಮ ತೆರಿಗೆ ವಿವಾದವನ್ನು ಇತ್ಯರ್ಥ ಪಡಿಸಿಕೊಂಡಿದ್ದೇವೆ. ಫ್ರಾನ್ಸ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಕಂಪನಿಗಳಿಗೂ ಈ ರೀತಿಯ ಸೌಲಭ್ಯ ಸಿಗುತ್ತಿದೆ' ಎಂದು ಸ್ಪಷ್ಟನೆ ನೀಡಿದೆ.

ಫ್ರಾನ್ ತೆರಿಗೆ​ ಸಂಸ್ಥೆ ರಿಲಯನ್ಸ್‌ ಫ್ಲ್ಯಾಗ್ ಅಟ್ಲಾಂಟಿಕ್‌ ಫ್ರಾನ್ಸ್‌ ಕಂಪನಿಯಿಂದ ₹ 1,182 ಕೋಟಿ (151 ದಶಲಕ್ಷ ಯೂರೋ) ಪಾವತಿ ಕೇಳಿತ್ತು. ಅಂತಿಮವಾಗಿ ಈ ತೆರಿಗೆ ವಿವಾದ ಇತ್ಯರ್ಥಗೊಳ್ಳುವಲ್ಲಿ ₹ 57 ಕೋಟಿ (7.3 ದಶಲಕ್ಷ ಯೂರೋ) ಪಡೆಯಿತು. ರಿಲಯನ್ಸ್​ ಫ್ಯಾಗ್ ಸಂಸ್ಥೆ ಫ್ರಾನ್ಸ್​ನಲ್ಲಿ ಟೆರೆಸ್ಟ್ರಿಯಲ್​ ಕೇಬಲ್​ ನೆಟ್​ ವರ್ಕ್ ಹಾಗೂ ಇತರ ಟೆಲಿಕಾಂ ಮೂಲ ಸೌಕರ್ಯಗಳ ಒಡೆತನ ಹೊಂದಿದೆ.

ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ರಕ್ಷಣಾ ಸಚಿವಾಲಯ ತೆರಿಗೆ ವಿವಾದ ಮತ್ತು ರಫೇಲ್ ಒಪ್ಪಂದದ ನಡುವೆ ಯಾವುದೇ ಸಂಬಂಧವಿಲ್ಲ. ಇದು ಸಂಪೂರ್ಣವಾಗಿ ಅಸಮರ್ಪಕವಾಗಿದೆ ಎಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಗಿನ ಫ್ರಾನ್ಸ್​ ಅಧ್ಯಕ್ಷ ಫ್ರಾನ್ಸ್‌ನ ಹೊಲಾಂಡ್‌ ಅವರೊಂದಿಗೆ 2015ರ ಏಪ್ರಿಲ್‌ 10ರಂದು ಪ್ಯಾರಿಸ್‌ನಲ್ಲಿ ಮಾತುಕತೆ ನಡೆಸಿದ ಬಳಿಕ 36 ರಫೇಲ್‌ ಫೈಟರ್‌ ಜೆಟ್‌ಗಳ ಖರೀದಿ ವ್ಯವಹಾರವನ್ನು ಪ್ರಕಟಿಸಿದ್ದರು. ಈ ವಹಿವಾಟು 2016ರ ಸೆ.23ರಂದು ಅಂತಿಮಗೊಂಡಿತ್ತು. ರಫೇಲ್ ಒಪ್ಪಂದದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಅನುಭವವಿಲ್ಲದ ರಿಲಯನ್ಸ್​ ಕಂಪನಿಗೆ ನೀಡಲಾಗಿದೆ ಎಂದು ಕಾಂಗ್ರೆಸ್​ ಸೇರಿದಂತೆ ಪ್ರತಿ ಪಕ್ಷಗಳು ಆರೋಪಿಸಿವೆ. ಈ ಬಗ್ಗೆ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ.

For All Latest Updates

TAGGED:

ABOUT THE AUTHOR

...view details