ಕರ್ನಾಟಕ

karnataka

ETV Bharat / business

1 ಲಕ್ಷ ರೂ. ಆರೋಗ್ಯ​ ವಿಮೆ, '0' ಬ್ಯಾಲೆನ್ಸ್​ನ 'ಏರ್​ಟೆಲ್ ಪೇಮೆಂಟ್ ಸುರಕ್ಷಾ ಸ್ಯಾಲರಿ ಅಕೌಂಟ್' ಸೇವೆ ಶುರು

ಸುರಕ್ಷಾ ಸಂಬಳ ಖಾತೆದಾರರಿಗೆ ಏರ್‌ಟೆಲ್ ವಿಮಾ ಸೌಲಭ್ಯವನ್ನೂ ಕಲ್ಪಿಸಿದೆ. ಅಪಘಾತ ವಿಮೆಯೂ ಇದರಲ್ಲಿ ಸೇರುತ್ತದೆ. ಆಫರ್ ಅಡಿಯಲ್ಲಿ ಖಾತೆದಾರರಿಗೆ 1 ಲಕ್ಷ ರೂ. ಆಕಸ್ಮಿಕ ಕವರ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಇದು ಕುಟುಂಬಕ್ಕೆ ಆರ್ಥಿಕ ರಕ್ಷಣೆ ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Airtel Payments
ಏರ್​ಟೆಲ್

By

Published : Jun 15, 2020, 11:51 PM IST

ನವದೆಹಲಿ: ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ನವೀನ ವೇತನ ಖಾತೆ ಸೇವೆಗಳಾದ 'ಸುರಕ್ಷಾ ಪೇಮೆಂಟ್​ ಅಕೌಂಟ್​' ಅನ್ನು ಏರ್‌ಟೆಲ್ ಪಾವತಿ ಬ್ಯಾಂಕ್ ಪ್ರಾರಂಭಿಸಿದೆ.

ಈ ಹೊಸ ಖಾತೆಗಳ ಮೂಲಕ ಎಂಎಸ್‌ಎಂಇ ಮತ್ತು ಇತರ ಸಂಸ್ಥೆಗಳು ನಗದು ರಹಿತ ಪಾವತಿಗೆ ಹಾಗೂ ತಮ್ಮ ಉದ್ಯೋಗಿಗಳಿಗೆ ಆರ್ಥಿಕ ಭದ್ರತಾ ಒದಗಿಸಲು ಸಾಧ್ಯವಾಗುತ್ತದೆ ಎಂದು ಏರ್‌ಟೆಲ್ ಪಾವತಿ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

ಸುರಕ್ಷಾ ಸಂಬಳ ಖಾತೆದಾರರಿಗೆ ಏರ್‌ಟೆಲ್ ವಿಮಾ ಸೌಲಭ್ಯವನ್ನೂ ಕಲ್ಪಿಸಿದೆ. ಅಪಘಾತ ವಿಮೆಯೂ ಇದರಲ್ಲಿ ಸೇರುತ್ತದೆ. ಆಫರ್ ಅಡಿಯಲ್ಲಿ ಖಾತೆದಾರರಿಗೆ 1 ಲಕ್ಷ ರೂ. ಆಕಸ್ಮಿಕ ಕವರ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಇದು ಕುಟುಂಬಕ್ಕೆ ಆರ್ಥಿಕ ರಕ್ಷಣೆ ನೀಡಲಿದೆ ಎಂದಿದೆ.

ಆಸ್ಪತ್ರೆಗೆ ದಾಖಲಾದ ಖಾತೆದಾರರಿಗೆ ದಿನಕ್ಕೆ 400 ರೂ. ಗರಿಷ್ಠ ಕವರ್‌ಗೆ ಗರಿಷ್ಠ 10 ದಿನಗಳವರೆಗೆ ಪಾವತಿಸುತ್ತದೆ. ಈ ನೀತಿಯು ಕೋವಿಡ್​-19 ಚಿಕಿತ್ಸೆ ಸಹ ಒಳಗೊಂಡಿರುತ್ತದೆ. ಆಸ್ಪತ್ರೆಗೆ ದಾಖಲಾಗುವಾಗ ವೇತನ ಮತ್ತು ಉಳಿತಾಯದ ಸಂಭವನೀಯ ನಷ್ಟದಿಂದ ಖಾತೆದಾರರ ಮೇಲಿನ ಪರಿಣಾಮವನ್ನು ತಗ್ಗಿಸುತ್ತದೆ ಎಂದು ಹೇಳಿದೆ.

ಖಾತೆಗೆ ಯಾವುದೇ ಕನಿಷ್ಠ ಬಾಕಿ ಅಗತ್ಯವಿಲ್ಲ. ಭಾರತದಾದ್ಯಂತ ಏರ್‌ಟೆಲ್ ಪಾವತಿ ಬ್ಯಾಂಕಿನ ಬ್ಯಾಂಕಿಂಗ್ ಕೇಂದ್ರಗಳಲ್ಲಿ ಖಾತೆದಾರನು ಅನುಕೂಲಕರ ಹಣವನ್ನು ಹಿಂಪಡೆಯಬಹುದು. ಗ್ರಾಹಕರು ನಗದು ಠೇವಣಿ ಮತ್ತು ಹಣವನ್ನು ವರ್ಗಾಯಿಸಬಹುದು.

ABOUT THE AUTHOR

...view details