ನವದೆಹಲಿ: 2019ರ ಡಿಸೆಂಬರ್ ಮಾಸಿಕದಲ್ಲಿ 12.67 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಎಂಪ್ಲಾಯೀಸ್ ಸ್ಟೇಟ್ ಇನ್ಶುರೆನ್ಸ್ ಕಾರ್ಪೋರೇಷನ್ (ಇಎಸ್ಐಸಿ) ತಿಳಿಸಿದೆ.
ಹಿಂಜರಿತದ ಮಧ್ಯೆ ಅದ್ಭುತ ಪವಾಡ... 30 ದಿನದಲ್ಲಿ 12.67 ಲಕ್ಷ ಜನಕ್ಕೆ ಕೆಲಸ ಸಿಕ್ತು..! - ವಾಣಿಜ್ಯ ಸುದ್ದಿ
2018ರ ಇದೇ ಮಾಸಿಕದಲ್ಲಿ 14.59 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದ್ದವು. 2018-19ರ ಹಣಕಾಸು ವರ್ಷದಲ್ಲಿ ಇಎಸ್‌ಐಸಿನ ಹೊಸ ಚಂದಾದಾರರ ಒಟ್ಟು ದಾಖಲಾತಿ 1.49 ಕೋಟಿ ಆಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ (ಎನ್‌ಎಸ್‌ಒ) ತನ್ನ ವರದಿಯಲ್ಲಿ ತಿಳಿಸಿದೆ.

2017ರ ಸೆಪ್ಟೆಂಬರ್ - 2019ರ ಡಿಸೆಂಬರ್ ಅವಧಿಯಲ್ಲಿ ಸುಮಾರು 3.50 ಕೋಟಿ ಹೊಸ ಚಂದಾದಾರರು ಇಎಸ್ಐಸಿ ಯೋಜನೆಗೆ ಸೇರಿಕೊಂಡಿದ್ದಾರೆ. ಎನ್ಎಸ್ಒ ವರದಿಯು ಇಎಸ್ಐಸಿ, ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ ಮತ್ತು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ಡಿಎ) ನಡೆಸುವ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಹೊಸ ಚಂದಾದಾರರ ವೇತನದಾರರ ದತ್ತಾಂಶವನ್ನು ಆಧರಿಸಿದೆ.