ಪುದುಚೆರಿ:ಕೊರೊನಾ ಬಿಕ್ಕಟ್ಟಿನಿಂದಾಗಿ ರೈಲ್ವೆ ಇಲಾಖೆಗೆ ಸಾಕಷ್ಟು ಹೊಡೆತ ಬಿದ್ದಿದ್ದು, ಪಶ್ಚಿಮ ರೈಲ್ವೆ ವಲಯಕ್ಕೆ ಬರೋಬ್ಬರಿ 1,784 ಕೊಟಿ ರೂ. ನಷ್ಟವಾಗಿದೆ.
ಉಪನಗರ ವಿಭಾಗದಲ್ಲಿ ಸುಮಾರು 263 ಕೋಟಿ ರೂ. ಹಾಗೂ ಉಪ ನಗರವಲ್ಲದ ವಿಭಾಗದಲ್ಲಿ ಸುಮಾರು 1,521 ಕೋಟಿ ರೂ. ನಷ್ಟವಾಗಿದೆ ಎಂದು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್‌ಒ) ಸುಮಿತ್ ಠಾಕೂರ್ ಮಾಹಿತಿ ನೀಡಿದ್ದಾರೆ.
ಈ ವರ್ಷ ಮಾರ್ಚ್ 1 ರಿಂದ ಜುಲೈ 16ರವರೆಗೆ ಟಿಕೆಟ್ ರದ್ದಾದ ಕಾರಣ 61.15 ಲಕ್ಷ ಪ್ರಯಾಣಿಕರಿಗೆ 398.01 ಕೋಟಿ ರೂ. ಮರು ಪಾವತಿಸುವುದಾಗಿ ಪಶ್ಚಿಮ ರೈಲ್ವೆ ದೃಢಪಡಿಸಿದೆ. ಪಶ್ಚಿಮ ರೈಲ್ವೆಯ ಪ್ರಧಾನ ಕಚೇರಿಯಾಗಿರುವ ಮುಂಬೈ ವಿಭಾಗವು 190.20 ಕೋಟಿ ರೂ. ಮರು ಪಾವತಿಸುವುದಾಗಿ ತಿಳಿಸಿದೆ.
ಕೋವಿಡ್ ಲಾಕ್ಡೌನ್ನಿಂದಾಗಿ ಮಾರ್ಚ್ ತಿಂಗಳ ಕೊನೆಯ ವಾರದಿಂದ ತಾತ್ಕಾಲಿಕವಾಗಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬಳಿಕ ಲಾಕ್ಡೌನ್ ನಡುವೆಯೇ ಅಂದರೆ ಮೇ 1ರಿಂದ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಕ್ಕೆ ಕಳುಹಿಸಲು ಭಾರತೀಯ ರೈಲ್ವೆಯು ಶ್ರಮಿಕ್ ರೈಲುಗಳ ಕಾರ್ಯಾಚರಣೆ ಪ್ರಾರಂಭಿಸಿತ್ತು.