ನವದೆಹಲಿ:ಭಾರತವು ಟೋಲ್ ಬೂತ್‌ಗಳನ್ನು ತೆರವುಗೊಳಿಸುತ್ತದೆ. ಒಂದು ವರ್ಷದೊಳಗೆ ಸಂಪೂರ್ಣ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ಅನುಷ್ಠಾನಕ್ಕೆ ತರಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಪ್ರಸ್ತುತ, ಶೇ 93 ರಷ್ಟು ವಾಹನಗಳು ಫಾಸ್ಟ್‌ಟ್ಯಾಗ್ ಬಳಸಿ ಟೋಲ್ ಪಾವತಿಸುತ್ತವೆ. ಉಳಿದ ಶೇ 7ರಷ್ಟು ಜನರು ಡಬಲ್ ಟೋಲ್ ಪಾವತಿಸಿದರೂ ಟ್ಯಾಗ್ ತೆಗೆದುಕೊಂಡಿಲ್ಲ ಎಂದರು.
ಒಂದು ವರ್ಷದೊಳಗೆ ದೇಶದ ಎಲ್ಲಾ ಟೋಲ್ ಬೂತ್‌ಗಳನ್ನು ತೆಗೆದುಹಾಕಲಾಗುವುದು ಎಂದು ನಾನು ಸದನಕ್ಕೆ ಭರವಸೆ ನೀಡಲು ಬಯಸುತ್ತೇನೆ. ಇದರರ್ಥ ಜಿಪಿಎಸ್ ಮೂಲಕ ಟೋಲ್ ಸಂಗ್ರಹ ನಡೆಯಲಿದೆ. ಜಿಪಿಎಸ್ ಇಮೇಜಿಂಗ್ (ವಾಹನಗಳ ಮೇಲೆ) ಆಧರಿಸಿ ಹಣ ಸಂಗ್ರಹಿಸಲಾಗುವುದು ಎಂದು ಗಡ್ಕರಿ ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆ ಹೇಳಿದರು.
ಇದನ್ನೂ ಓದಿ: ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಹೂಡಿಕೆ ಸ್ವಿಂಗ್ಗೆ ಚೀನಾದ 'ಕೂ' ಆ್ಯಪ್ ಕ್ಲೀನ್ ಬೋಲ್ಡ್!
ಫಾಸ್ಟ್‌ಟ್ಯಾಗ್‌ಗಳನ್ನು ಬಳಸಿಕೊಂಡು ಟೋಲ್ ಪಾವತಿಸದ ವಾಹನಗಳ ಬಗ್ಗೆ ಪೊಲೀಸ್ ತನಿಖೆಗೆ ಸೂಚನೆ ನೀಡಿದ್ದೇನೆ. ವಾಹನಗಳಲ್ಲಿ ಫಾಸ್ಟ್‌ಟ್ಯಾಗ್‌ಗಳನ್ನು ಅಳವಡಿಸದಿದ್ದರೆ ಟೋಲ್ ಕಳ್ಳತನ ಮತ್ತು ಜಿಎಸ್‌ಟಿ ತಪ್ಪಿಸಿಕೊಳ್ಳುವ ಪ್ರಕರಣಗಳು ಕೂಡ ಇವೆ ಎಂದರು.