ನವದೆಹಲಿ: ಪ್ರತಿಯೊಬ್ಬರಿಗೂ ಸ್ವಾಗತವಿದೆ ಎಂದು ವಿಶ್ವದ ಯಾವುದೇ ದೇಶ ಹೇಳುತ್ತಿಲ್ಲ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಪೌರತ್ವ (ತಿದ್ದುಪಡಿ) ಕಾಯ್ದೆಯ ಬಗ್ಗೆ ಭಾರತದ ನಡೆಯನ್ನು ಟೀಕಿಸುವವರ ವಿರುದ್ಧ ಹರಿಹಾಯ್ದರು.
ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗವು (ಯುಎನ್‌ಎಚ್‌ಆರ್‌ಸಿ) ಟೀಕಿಸಿದ್ದಕ್ಕಾಗಿ ಜೈಶಂಕರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಅದರ (ಯುಎನ್‌ಎಚ್‌ಆರ್‌ಸಿ) ನಿರ್ದೇಶಕರು ಈ ಹಿಂದೆ ಕೂಡ ತಪ್ಪು ಮಾಡಿದ್ದರು. ಕಾಶ್ಮೀರ ಸಮಸ್ಯೆಯನ್ನು ನಿಭಾಯಿಸುವ ಬಗ್ಗೆ ವಿಶ್ವಸಂಸ್ಥೆಯ ವಿಭಾಗ ಹಿಂದಿನ ದಾಖಲೆಯನ್ನೊಮ್ಮೆ ನೋಡಿಕೊಳ್ಳಬೇಕು ಎಂದು ಕಿವಿ ಹಿಂಡಿದರು.