ಮುಂಬೈ: ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಮುಂಬೈ ಷೇರುಮಾರುಕಟ್ಟೆಯಲ್ಲಿ ಗೂಳಿಯ ಓಟ ಮುಂದುವರೆದಿದ್ದು, ಸೆನ್ಸೆಕ್ಸ್ 650 ಅಂಕಗಳ ಮಹಾ ಜಿಗಿತ ಕಂಡಿದೆ.
ಅಮೆರಿಕ ಚುನಾವಣೆ ಎಫೆಕ್ಟ್: 650 ಅಂಕ ಜಿಗಿದು ದಾಖಲೆ ಬರೆದ ಸೆನ್ಸೆಕ್ಸ್ - ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 118 ಅಂಕಗಳ ಏರಿಕೆ
ಮುಂಬೈ ಷೇರುಮಾರುಕಟ್ಟೆಯಲ್ಲಿ ಗೂಳಿಯ ಓಟ ಮುಂದುವರೆದಿದ್ದು, ಸೆನ್ಸೆಕ್ಸ್ 650 ಅಂಕಗಳ ದಾಖಲೆಯ ಆರಂಭಿಕ ಏರಿಕೆ ಕಂಡಿದ್ದು, ನಿಫ್ಟಿ 118 ಅಂಕಗಳ ಏರಿಕೆಯೊಂದಿಗೆ 12,400ರಲ್ಲಿ ವಹಿವಾಟು ನಡೆಸುತ್ತಿದೆ.
ಸೆನ್ಸೆಕ್ಸ್
ಜೋ ಬೈಡನ್ ಅಮೆರಿಕದ ಅಧ್ಯಕ್ಷ ಸ್ಥಾನವನ್ನು ಗೆಲ್ಲುವ ಸಾಧ್ಯತೆಯನ್ನು ಕಂಡುಕೊಂಡಿದ್ದ ಹೂಡಿಕೆದಾರರು ಮಾರುಕಟ್ಟೆಯ ಎಲ್ಲ ವಲಯಗಳಲ್ಲಿ ಖರೀದಿಯ ಭರಾಟೆಯಲ್ಲಿ ತೊಡಗಿದ್ದರು. ಪರಿಣಾಮ ಸೆನ್ಸೆಕ್ಸ್ ದಾಖಲೆಯ ಏರಿಕೆ ಕಂಡಿದೆ.
ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 118 ಅಂಕಗಳ ಏರಿಕೆಯೊಂದಿಗೆ 12,400ರಲ್ಲಿ ವಹಿವಾಟು ನಡೆಸುತ್ತಿದೆ.