ನವದೆಹಲಿ: ಕಳೆದೊಂದು ವಾರದಿಂದ ನಿರಂತರವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗುತ್ತಿದ್ದು, ಇಂದೂ ಕೂಡ ಗ್ರಾಹಕರು ಬಾಯಿ ಮೇಲೆ ಬೆರೆಳು ಇಡುವಂತಾಗಿದೆ.
ಇಂದು ಲೀಟರ್ ಪೆಟ್ರೋಲ್ಗೆ 59 ಪೈಸೆ ಹಾಗೂ ಡೀಸೆಲ್ಗೆ 58 ಪೈಸೆ ಏರಿಕೆಯಾಗಿದೆ. ದೇಶದ ಪ್ರಮುಖ ನಗರಗಳಾದ ದೆಹಲಿ, ಬೆಂಗಳೂರು, ಮುಂಬೈ, ಚೆನ್ನೈ ಮತ್ತು ಹೈದರಾಬಾದ್ಗಳಲ್ಲಿ ಬೆಲೆ ಹೆಚ್ಚಳವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಇಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕ್ರಮವಾಗಿ 75.16 ರೂ ಮತ್ತು 73.39 ರೂ.ಇದೆ.