12ನೇ ದಿನವೂ ಇಂಧನ ಬೆಲೆ ಏರಿಕೆ: ಬೆಂಗಳೂರಲ್ಲಿ ಪೆಟ್ರೋಲ್ ದರ ಎಷ್ಟು ಗೊತ್ತೆ? - Petrol and diesel prices in Bengaluru
ನಿರಂತರವಾಗಿ ಇಂಧನ ದರ ಏರುತ್ತಿದ್ದು, ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್‌ಗೆ 93.67 ರೂ. ಹಾಗೂ ಡೀಸೆಲ್ಗೆ 85.84 ರೂ. ಬೆಲೆ ಇದೆ.
12ನೇ ದಿನವೂ ಇಂಧನ ಬೆಲೆ ಏರಿಕೆ
By
Published : Feb 20, 2021, 10:00 AM IST
ನವದೆಹಲಿ: ದೇಶಾದ್ಯಂತ ಇಂಧನ ಬೆಲೆ ಏರಿಕೆಯ ನಾಗಾಲೋಟ ಮುಂದುವರೆದಿದ್ದು, 12ನೇ ದಿನವೂ ಗ್ರಾಹಕರ ಜೇಬಿಕೆ ಕತ್ತರಿ ಬೀಳುತ್ತಿದೆ.
ಇಂದು ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ ಮತ್ತೆ 39 ಪೈಸೆ ಹಾಗೂ ಡೀಸೆಲ್ ದರದಲ್ಲಿ 37 ಪೈಸೆ ಹೆಚ್ಚಳವಾಗಿದೆ. ಈ ದರವು ದೇಶದ ಎಲ್ಲಾ ಮೆಟ್ರೋ ನಗರಗಳಿಗೆ ಅನ್ವಯಿಸುತ್ತದೆ. ಮಧ್ಯಪ್ರದೇಶದಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ ನೂರು ರೂಪಾಯಿ ಗಡಿ ದಾಟಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್‌ಗೆ 90.58 ರೂ ಹಾಗೂ ಡೀಸೆಲ್ಗೆ 80.97 ರೂ. ಬೆಲೆ ನಿಗದಿಯಾಗಿದೆ.
ಈ ಕೆಳಗಿನ ಮೆಟ್ರೋ ನಗರಗಳಲ್ಲಿ ಇಂಧನ ಬೆಲೆ ಹೀಗಿದೆ (ಪ್ರತಿ ಲೀಟರ್ಗೆ ರೂ.ಗಳಲ್ಲಿ)
ನಗರ
ಪೆಟ್ರೋಲ್
ಡೀಸೆಲ್
ನವದೆಹಲಿ
90.58
80.97
ಬೆಂಗಳೂರು
93.67
85.84
ಮುಂಬೈ
97
87.06
ಹೈದರಾಬಾದ್
93.78
87.91
ಚೆನ್ನೈ
92.59
92.59
ಪೆಟ್ರೋಲ್, ಡೀಸೆಲ್ ಬೆಲೆ ಹೀಗೆ ನಿರಂತರವಾಗಿ ಗಗನಕ್ಕೇರುತ್ತಿರುವುದಕ್ಕೆ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲಾ, ಇಂಧನ ಬೆಲೆ ಏರಿಕೆಯಿಂದಾಗಿ 2014ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಸುಮಾರು 21.50 ಲಕ್ಷ ಕೋಟಿ ರೂಪಾಯಿ ಗಳಿಸಿದೆ ಎಂದು ಕಾಂಗ್ರೆಸ್ ಆರೋಪಿದ್ದಾರೆ.