ಕರ್ನಾಟಕ

karnataka

ಲಾಕ್​ಡೌನ್​ ಸಡಿಲಿಕೆ​ ಬಳಿಕ ಬಸ್​ ಸಂಚಾರ: ಮೊದಲ ದಿನ ಬೆಳಗಾವಿ ಸಾರಿಗೆ ಇಲಾಖೆಗೆ ಬಂದ ಆದಾಯವೆಷ್ಟು?

By

Published : May 20, 2020, 10:42 AM IST

Updated : May 20, 2020, 2:32 PM IST

ಕೊರೊನಾ ನಿಯಂತ್ರಣ ಮಾಡಲೆಂದು ಸರ್ಕಾರ ಲಾಕ್​ಡೌನ್​ ಜಾರಿ ಮಾಡಿದ್ದು, ನಿನ್ನೆಯಿಂದ ಸಾರಿಗೆ ಬಸ್​​ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ನಿನ್ನೆ ಒಂದೇ ದಿನಕ್ಕೆ ಬೆಳಗಾವಿಯಲ್ಲಿ 120 ಬಸ್​​ಗಳು ಸಂಚಾರ ನಡೆಸಿದ್ದು, 1.67 ಲಕ್ಷದಷ್ಟು ಆದಾಯ ಇಲಾಖೆಗೆ ಬಂದಿದೆ.

No income for transport department
ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ

ಬೆಳಗಾವಿ:ಲಾಕ್​ಡೌನ್​ನಿಂದ ಸ್ಥಗಿತಗೊಂಡಿದ್ದ ಬಸ್​​ ಸಂಚಾರ ಮತ್ತೆ ಆರಂಭವಾಗಿದ್ದು, ನಿನ್ನೆ ಒಂದೇ ದಿನಕ್ಕೆ ಇಲಾಖೆಗೆ 1.67 ಲಕ್ಷ ರೂಪಾಯಿ ಆದಾಯ ಬಂದಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ ತಿಳಿಸಿದರು.

ನಗರದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ‌ನಿರ್ದೇಶನದಂತೆ ಜಿಲ್ಲೆಯಲ್ಲಿ ನಿನ್ನೆಯಿಂದ ಬಸ್ ಸೇವೆ ಆರಂಭಿಸಲಾಗಿದೆ.‌ ನಗರ ಸಾರಿಗೆ ಸೇರಿದಂತೆ ಜಿಲ್ಲೆಯಾದ್ಯಂತ ‌ನಿನ್ನೆ 120 ಬಸ್ ಓಡಾಡಿದ್ದವು. ಪ್ರಯಾಣಿಕರಿಲ್ಲದೆ ಬಹುತೇಕ ‌ಬಸ್​ಗಳು ಖಾಲಿಯಾಗಿ ಸಂಚಾರ ‌ನಡೆಸಿದ್ದವು.

ಈ ಮೂಲಕ ಒಂದೇ ದಿನಕ್ಕೆ 1.67 ಲಕ್ಷಗಳಷ್ಟು ಆದಾಯ ಇಲಾಖೆಗೆ ಬಂದಿದೆ. 200 ಕ್ಕೂ ಅಧಿಕ ಸಿಬ್ಬಂದಿ ನಿನ್ನೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಸಿಬ್ಬಂದಿಗೆ ಸಂಬಳ‌ ನೀಡುವಷ್ಟೂ ಮೊದಲ ದಿನ ಆದಾಯ ಬಂದಿಲ್ಲ. ಈ ಮೊದಲು ಬೆಳಗಾವಿ ವಿಭಾಗದಲ್ಲಿ ನಿತ್ಯ 77 ಲಕ್ಷ ರೂ. ಆದಾಯ ಬರುತ್ತಿತ್ತು. ಕೊರೊನಾದಿಂದಿ ಹೆಚ್ಚಿನ ‌ಆದಾಯ ಬಂದಿಲ್ಲ ಎಂದು ಅವರು ತಿಳಿಸಿದರು.

Last Updated : May 20, 2020, 2:32 PM IST

ABOUT THE AUTHOR

...view details