ಕರ್ನಾಟಕ

karnataka

By

Published : Jul 3, 2020, 4:47 PM IST

ETV Bharat / business

ಜಿಎಸ್​​ಟಿ ತೆರಿಗೆ ವಿಳಂಬ ಶುಲ್ಕ ₹ 500; ಸೆಪ್ಟಂಬರ್​​​ವರೆಗೂ ಗಡುವು

ತೆರಿಗೆ ಪಾವತಿ ಬಾಕಿ ಉಳಿಸಿಕೊಂಡವರಿಗೆ ವಿಳಂಬ ಶುಲ್ಕ ಕಡಿಮೆ ಮಾಡಲಾಗಿದ್ದು, ಪೂರ್ಣ ಪ್ರಮಾಣದಲ್ಲಿ ಪಾವತಿಸಿದವರಿಗೆ ವಿಳಂಬ ಶುಲ್ಕವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ..

Late fee on GST returns capped till July to Rs 500
ಜಿಎಸ್‌ಟಿ

ನವದೆಹಲಿ :ಜುಲೈ 2017ರಿಂದ ಜುಲೈ 2020ರವರೆಗೆ ವಿಸ್ತರಿಸಿದ ತೆರಿಗೆ ಅವಧಿಗೆ, ಪ್ರತಿ ರಿಟರ್ನ್‌ಗೆ ಜಿಎಸ್‌ಟಿಆರ್-3ಬಿಯ ಗರಿಷ್ಠ ವಿಳಂಬ ಶುಲ್ಕವನ್ನು ₹500 ನಿಗದಿಪಡಿಸಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಜಿಎಸ್​​ಟಿ ತೆರಿಗೆದಾರರಿಗೆ ಪರಿಹಾರ ನೀಡಿದೆ.

ಮೇ, ಜೂನ್‌ ಮತ್ತು ಜುಲೈ ತಿಂಗಳ ರಿಟರ್ನ್‌ ಸಲ್ಲಿಕೆ ಗಡುವನ್ನು ಯಾವುದೇ ಬಡ್ಡಿ ಅಥವಾ ವಿಳಂಬ ಶುಲ್ಕ ಪಾವತಿ ಇಲ್ಲದೆ ಸೆಪ್ಟೆಂಬರ್‌ವರೆಗೆ ವಿಸ್ತರಿಸಲಾಗಿದೆ. ಫೆಬ್ರವರಿ, ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳ ರಿಟರ್ನ್​​​​ ವಿಳಂಬ ಸಲ್ಲಿಕೆಗೆ ವಿಧಿಸಲಾಗುವ ಬಡ್ಡಿಯನ್ನು ಶೇ.18 ರಿಂದ ಶೇ. 9ಕ್ಕೆ ಇಳಿಸಲಾಗಿದೆ. ಸೆಪ್ಟೆಂಬರ್‌ವರೆಗೆ ಈ ಬಡ್ಡಿ ಅನ್ವಯವಾಗಲಿದೆ. ತೆರಿಗೆ ಹೊಣೆಗಾರಿಕೆ ಇಲ್ಲದಿದ್ರೆ ವಿಳಂಬ ಶುಲ್ಕವಿರುವುದಿಲ್ಲ ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಸೂಚಿಸಿದೆ.

ಯಾವುದೇ ತೆರಿಗೆ ಹೊಣೆಗಾರಿಕೆ ಇದ್ರೆ ವಿಳಂಬ ಪಾವತಿಸಲೇಬೇಕು. 2017ರ ಜುಲೈನಿಂದ 2020ರ ಜನವರಿ ಅವಧಿಯಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿರದ ನೋಂದಾಯಿತ ಸಂಸ್ಥೆಗಳು ಜಿಎಸ್‌ಟಿ ರಿಟರ್ನ್‌ ಸಲ್ಲಿಸಿರದಿದ್ದರೆ ಅವುಗಳಿಗೆ ವಿಳಂಬ ಶುಲ್ಕ ವಿಧಿಸುವುದಿಲ್ಲ. ತಿಂಗಳ ಮಾರಾಟ ರಿಟರ್ನ್‌ ಸಲ್ಲಿಸದ ಇತರರಿಗೂ ವಿಳಂಬ ಶುಲ್ಕವನ್ನು ಗರಿಷ್ಠ ₹500ಕ್ಕೆ ಮಿತಿಗೊಳಿಸಲಾಗಿದೆ. ಜೂನ್​​ 12ರಂದು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.

ABOUT THE AUTHOR

...view details