ನವದೆಹಲಿ: 12 ಸಂಖ್ಯೆಗಳ ಆಧಾರ್ ಅನ್ನು ಬ್ಯಾಂಕ್ ಖಾತೆಯ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್ ಕಾರ್ಡ್) ಜೋಡಣೆಗೆ ಮಾರ್ಚ್ 31 ಕೊನೆಯ ದಿನವೆಂದು ಡೆಡ್ಲೈನ್ ನೀಡಲಾಗಿತ್ತು. ಆದ್ರೆ ಪ್ಯಾನ್ ಕಾರ್ಡ್ಗೆ ಆಧಾರ್ ಜೋಡಣೆ ಮಾಡದವರಿಗೆ ಮತ್ತೊಂದು ಸಮಯಾವಕಾಶ ಸಿಕ್ಕಿದೆ.
ಆಧಾರ್- ಪ್ಯಾನ್ ನಂ. ಜೋಡಣೆ ಮಾಡದವರಿಗೆ ಮತ್ತೊಂದು ಅವಕಾಶ
ನಂಬರ್ ಜೋಡಣೆ ಮಾಡದೇ ಹೋದರೆ ಏನಾಗುತ್ತದೆ ಎಂಬುದರ ಕುರಿತು ಐಟಿ ಇಲಾಖೆ ಇದುವರೆಗೂ ಸ್ಪಷ್ಟನೆ ಸಹ ನೀಡಿಲ್ಲ. ಆದಾಯ ತೆರಿಗೆ ರಿಟರ್ನ್ಸ್ ಫೈಲ್, ವಾಣಿಜ್ಯಾತ್ಮಕ ಬಳಕೆ, ಬ್ಯಾಂಕಿಂಗ್ ವಹಿವಾಟು ಸೇರಿದಂತೆ ಕೆಲವು ವ್ಯವಹಾರಗಳಲ್ಲಿ ತೊಡಕಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಆಧಾರ್- ಪ್ಯಾನ್
ಇದಕ್ಕೂ ಮೊದಲು ಆಧಾರ್- ಪ್ಯಾನ್ ಜೋಡಣೆ 2018ರ ಜೂನ್ 30ಕ್ಕೆ ಕೊನೆಯ ದಿನವೆಂದು ಹೇಳಲಾಗಿತ್ತು. ಜನರು ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದಿಸದೇ ಇದ್ದಾಗ ದಿನಾಂಕವನ್ನು 2019ರ ಮಾರ್ಚ್ 31ಕ್ಕೆ ಮುಂದೂಡಲಾಗಿತ್ತು. ಈಗ ಮತ್ತೆ ದಿನಾಂಕವನ್ನು ತೆರಿಗೆ ಇಲಾಖೆ ವಿಸ್ತರಿಸಿದೆ.
'ಆಧಾರ್ ಸಂಖ್ಯೆಯನ್ನು ಪಾನ್ ಜೊತೆಗೆ ಸಂಪರ್ಕಿಸಲು ಕೊನೆಯ ದಿನಾಂಕವನ್ನು 2019ರ ಸೆಪ್ಟೆಂಬರ್ 30ರ ವರೆಗೂ ವಿಸ್ತರಿಸಲಾಗಿದೆ. ಎಪ್ರಿಲ್ 1 ರಿಂದ ಜಾರಿಗೆ ಬರುವಂತೆ ಆಧಾರ್ ಸಂಖ್ಯೆಯನ್ನು ಉಲ್ಲೇಖಿಸಿ ಆದಾಯದ ಮರುಪಾವತಿ ಸಲ್ಲಿಸುವುದು ಕಡ್ಡಾಯವೆಂದು ಕೇಂದ್ರೀಯ ತೆರಿಗೆ ಇಲಾಖೆ ನಿರ್ದೇಶಕ ಮಂಡಳಿ ಸೂಚಿಸಿದೆ.