ಮುಂಬೈ :ಮಾಹಿತಿ ತಂತ್ರಜ್ಞಾನ ಮತ್ತು ಆರ್ಥಿಕ ಸೇವೆಗಳ ಮೂಲಕ ದೇಶದಲ್ಲಿ ಅತ್ಯಂತ ಪರಿಸರ, ಸಾಮಾಜಿಕ ಮತ್ತು ಆಡಳಿತ (ಇಎಸ್‌ಜಿ) ನಿರ್ವಹಣೆಯಲ್ಲಿ ದೇಶ 2ನೇ ಅತಿದೊಡ್ಡ ಸಾಫ್ಟ್‌ವೇರ್ ರಫ್ತುದಾರ ಇನ್ಫೋಸಿಸ್ ಕ್ರಿಸಿಲ್ ಸಿದ್ಧಪಡಿಸಿರುವ ಮೆಟ್ರಿಕ್‌ನಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದೆ.
ಕ್ರಿಸಿಲ್ ಸಿದ್ಧಪಡಿಸಿದ ಮಾಹಿತಿ ಪ್ರಕಾರ, ತೈಲ ಮತ್ತು ಅನಿಲ, ರಾಸಾಯನಿಕಗಳು, ಲೋಹಗಳು ಮತ್ತು ಗಣಿಗಾರಿಕೆ ಮತ್ತು ಸಿಮೆಂಟ್ ಕಂಪನಿಗಳು ಅತಿ ಕಡಿಮೆ ಇಎಸ್‌ಜಿ ಅಂಕಗಳನ್ನು ಹೊಂದಿವೆ. ಇವು ಹೆಚ್ಚಿನ ನೈಸರ್ಗಿಕ-ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತವೆ. ಆ ಮೂಲಕ ಹೆಚ್ಚಿನ ಹೊರಸೂಸುವಿಕೆಯೊಂದಿಗೆ ಪರಿಸರ ಮತ್ತು ಸಮುದಾಯಗಳ ಮೇಲೆ ಪರಿಣಾಮ ಬಿರುತ್ತವೆ.
ಸರ್ಕಾರದ ನಿರ್ಧಾರಗಳು, ನಿಯಂತ್ರಕರು, ಹೂಡಿಕೆದಾರರು, ಸಾಲಗಾರರು ಮತ್ತು ಕಾರ್ಪೊರೇಟ್‌ಗಳ ನಿರ್ಧಾರಗಳಲ್ಲಿ ಇಎಸ್‌ಜಿ ಈಗಾಗಲೇ ಭೌತಿಕ ಪಾತ್ರ ವಹಿಸುತ್ತಿದೆ ಎಂದು ಕ್ರಿಸಿಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಶು ಸುಯಾಶ್ ಹೇಳಿದ್ದಾರೆ.