ಕರ್ನಾಟಕ

karnataka

ETV Bharat / business

2007ರ ಮಟ್ಟಕ್ಕಿಳಿದ ತೈಲ ಬೇಡಿಕೆ: ಶೇ. 5ರ ವೃದ್ಧಿಗೆ ಬೇಕು 2 ವರ್ಷ - ಧರ್ಮೇಂದ್ರ ಪ್ರಧಾನ್

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ, ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಧಿಸಿತ್ತು. ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ರಾಷ್ಟ್ರದಲ್ಲಿ ಇಂಧನ ಮಾರಾಟವು 2007ರ ವರ್ಷದಲ್ಲಿನ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿಕೆ ಆಯಿತು. ಮೇ ಆರಂಭದಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಬೇಡಿಕೆ ಪ್ರಮಾಣ ಶೇ. 70ರಷ್ಟು ಕುಸಿದಿದೆ.

fuel demand
ಇಂಧನ

By

Published : Jun 16, 2020, 7:04 PM IST

ನವದೆಹಲಿ: ಭಾರತದ ಇಂಧನ ಬೇಡಿಕೆ ಜೂನ್ ಮೊದಲಾರ್ಧದಲ್ಲಿ ಕೋವಿಡ್ ಪೂರ್ವದ ಶೇ. 80-85ರ ಮಟ್ಟಕ್ಕೆ ತಲುಪಿದೆ. ಶೇ. 5ರಷ್ಟು ಬೆಳವಣಿಗೆಯ ಹಾದಿಗೆ ಮರಳಲು ಎರಡು ವರ್ಷಗಳ ಕಾಲ ತೆಗೆದುಕೊಳ್ಳಬಹುದು ಎಂದು ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ, ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಧಿಸಿತ್ತು. ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ರಾಷ್ಟ್ರದಲ್ಲಿ ಇಂಧನ ಮಾರಾಟವು 2007ರ ವರ್ಷದಲ್ಲಿನ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿಕೆ ಆಯಿತು.

ಮೇ ಆರಂಭದಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಬೇಡಿಕೆ ಪ್ರಮಾಣ ಶೇ 70ರಷ್ಟು ಕುಸಿದಿದೆ.

2019ರ ಜೂನ್​ಗೆ ಹೋಲಿಸಿದರೆ 2020ರ ಜೂನ್ ಮೊದಲ 15 ದಿನಗಳಲ್ಲಿ ಪೆಟ್ರೋಲಿಯಂ ಉತ್ಪನ್ನದ ಬೇಡಿಕೆ ಕೋವಿಡ್ ಪೂರ್ವದ ಶೇ. 80-85ಕ್ಕೆ ಏರಿಕೆ ಆಗಿದೆ ಎಂದು ವೆಬ್‌ನಾರ್‌ನಲ್ಲಿ ಸಚಿವ ಪ್ರಧಾನ್ ಹೇಳಿದ್ದಾರೆ.

ಮೇ ತಿಂಗಳಲ್ಲಿ 14.65 ಮಿಲಿಯನ್ ಟನ್ ಇಂಧನ ಬಳಕೆ ಏಪ್ರಿಲ್​ಗಿಂತ ಶೇ 47.4ರಷ್ಟು ಹೆಚ್ಚಾಗಿದೆ. ಆದರೆ, ಹಿಂದಿನ ವರ್ಷಕ್ಕಿಂತ 23.3 ಶೇ ಕಡಿಮೆಯಾಗಿದೆ. ಡೀಸೆಲ್ ಬಳಕೆ ಮೇ ತಿಂಗಳಲ್ಲಿ ಶೇ 29.4 ರಷ್ಟು ಕುಸಿದಿದ್ದರೆ, ಪೆಟ್ರೋಲ್ ಮಾರಾಟವು ಶೇ 35.3ರಷ್ಟು ಕ್ಷೀಣಿಸಿದೆ.

ಜೂನ್ 1 ರಿಂದ 15ರ ತನಕ ಡೀಸೆಲ್ ಬೇಡಿಕೆ ಚೇತರಿಸಿಕೊಂಡಿದ್ದು, 2.67 ದಶಲಕ್ಷ ಟನ್‌ಗಳಷ್ಟಾಗಿದೆ. ಕಳೆದ ವರ್ಷಕ್ಕಿಂತ ಶೇ 15ರಷ್ಟು ಕಡಿಮೆಯಾಗಿದೆ. 9,30,000 ಟನ್‌ಗಳಷ್ಟು ಪೆಟ್ರೋಲ್ ಮಾರಾಟವು ಕಳೆದ ವರ್ಷಕ್ಕಿಂತ ಶೇ 18ರಷ್ಟು ಕಡಿಮೆಯಾಗಿದೆ ಎಂದು ಉದ್ಯಮದ ಅಂಕಿ ಅಂಶಗಳು ತಿಳಿಸಿವೆ.

ವಿಮಾನಯಾನ ಸಂಸ್ಥೆಗಳ ತಮ್ಮ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರಿಂದ ಎಟಿಎಫ್ ಮಾರಾಟವು ಬಹುತೇಕ ಕುಸಿದಿದೆ. ಜೂನ್ ಮೊದಲಾರ್ಧದಲ್ಲಿ ವರ್ಷದ ಹಿಂದಿನ ಪ್ರಮಾಣಕ್ಕಿಂತ ಶೇ 73ರಷ್ಟು ಇಳಿಕೆಯಾಗಿದೆ. ಎಲ್‌ಪಿಜಿ ಮಾರಾಟವು ಶೇ 7ರಷ್ಟು ಏರಿಕೆಯಾಗಿ 9,60,000 ಟನ್‌ಗಳಿಗೆ ತಲುಪಿದೆ.

ABOUT THE AUTHOR

...view details