ಮುಂಬೈ: ಏಪ್ರಿಲ್ 9ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 4.344 ಬಿಲಿಯನ್ ಡಾಲರ್ ಏರಿಕೆಯಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ಸಾಪ್ತಾಹಿಕ ಅಂಕಿಅಂಶಗಳ ಪ್ರಕಾರ, ಏಪ್ರಿಲ್ 2ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು ನಿಧಿ 576.869 ಬಿಲಿಯನ್ ಡಾಲರ್ನಿಂದ 581.213 ಬಿಲಿಯನ್ ಡಾಲರ್ಗೆಗೆ ತಲುಪಿದೆ.
ಭಾರತದ ವಿದೇಶಿ ವಿನಿಮಯ ಸಂಗ್ರಹವು ವಿದೇಶಿ ಕರೆನ್ಸಿ ಸ್ವತ್ತುಗಳು (ಎಫ್ಸಿಎ), ಚಿನ್ನದ ಮೀಸಲು, ವಿಶೇಷ ಡ್ರಾಯಿಂಗ್ ರೈಟ್ಸ್ (ಎಸ್ಡಿಆರ್) ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜತೆಗೆ ದೇಶದ ಮೀಸಲು ಸ್ಥಾನ ಒಳಗೊಂಡಿದೆ.
ಸಾಪ್ತಾಹಿಕ ಆಧಾರದ ಮೇಲೆ ವಿದೇಶಿ ವಿನಿಮಯ ನಿಕ್ಷೇಪಗಳ ಅತಿದೊಡ್ಡ ಘಟಕವಾದ ಎಫ್ಸಿಎಗಳು 3.017 ಬಿಲಿಯನ್ ಡಾಲರ್ನಿಂದ 539.455 ಬಿಲಿಯನ್ ಡಾಲರ್ಗೆ ಏರಿದೆ. ದೇಶದ ಚಿನ್ನದ ಸಂಗ್ರಹ ಮೌಲ್ಯವು 1.297 ಬಿಲಿಯನ್ ಡಾಲರ್ ಗಳಿಸಿ 35.320 ಬಿಲಿಯನ್ ಡಾಲರ್ಗೆ ತಲುಪಿದೆ.
ಎಸ್ಡಿಆರ್ ಮೌಲ್ಯವು 6 ಮಿಲಿಯನ್ ಡಾಲರ್ ಹೆಚ್ಚಳವಾಗಿ 1.492 ಬಿಲಿಯನ್ ಡಾಲರ್ನಷ್ಟಾಗಿದೆ. ಐಎಂಎಫ್ನೊಂದಿಗೆ ದೇಶದ ಮೀಸಲು ಸ್ಥಾನವು 24 ಮಿಲಿಯನ್ ಡಾಲರ್ ಹೆಚ್ಚಳದಿಂದ 4.946 ಬಿಲಿಯನ್ ಡಾಲರ್ಗೆ ತಲುಪಿದೆ.