ಕರ್ನಾಟಕ

karnataka

ETV Bharat / business

ಪ.ಬಂಗಾಳ 7ನೇ ಹಂತದ ಮತದಾನಕ್ಕೂ ಮುನ್ನ ಟಿಎಂಸಿ ಮುಖಂಡನಿಗೆ ಐಟಿ ನೋಟಿಸ್.. - ಅನುಬರತ ಮಂಡಲ್

ಅನುಬರತ ಮಂಡಲ್ ಮತ್ತು ಅವರ ನಾಲ್ವರು ಸಂಬಂಧಿಕರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಅನುಬರತ ಮಂಡಲ್ ಟಿಎಂಸಿ ಬಿರ್ಭಮ್ ಜಿಲ್ಲಾಧ್ಯಕ್ಷ ಮತ್ತು ಪಕ್ಷದ ಪ್ರಭಾವಿ ಮುಖಂಡರಾಗಿದ್ದಾರೆ. ಇವರಿಗೆ ಆದಾಯ ತೆರಿಗೆ ಇಲಾಖೆ ನೋಟಿಗ ನೀಡಿದೆ ಎಂದು ಉನ್ನತ ಮೂಲಗಳು ದೃಢಪಡಿಸಿವೆ..

ಅನುಬರತ ಮಂಡಲ್
ಅನುಬರತ ಮಂಡಲ್

By

Published : Apr 23, 2021, 6:20 PM IST

Updated : Apr 23, 2021, 6:43 PM IST

ಕೋಲ್ಕತ್ತಾ :ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು 2021ರ ಏಪ್ರಿಲ್ 29ರಂದು ಎಂಟನೇ ಹಂತದಲ್ಲಿ ಮತದಾನಕ್ಕೆ ಸಜ್ಜಾಗಿದೆ. ಇದಕ್ಕೂ ಮುನ್ನ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ಪಕ್ಷಗಳ ನಡುವೆ ಹೊಸ ಸುತ್ತಿನ ರಾಜಕೀಯ ಸಮರಕ್ಕೆ ನಾಂದಿಯಾಗಿದೆ.

ಅನುಬರತ ಮಂಡಲ್ ಮತ್ತು ಅವರ ನಾಲ್ವರು ಸಂಬಂಧಿಕರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಅನುಬರತ ಮಂಡಲ್ ಟಿಎಂಸಿ ಬಿರ್ಭಮ್ ಜಿಲ್ಲಾಧ್ಯಕ್ಷ ಮತ್ತು ಪಕ್ಷದ ಪ್ರಭಾವಿ ಮುಖಂಡರಾಗಿದ್ದಾರೆ. ಇವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ ಎಂದು ಉನ್ನತ ಮೂಲಗಳು ದೃಢಪಡಿಸಿವೆ.

ಈ ಬಗ್ಗೆ ಆದಾಯ ತೆರಿಗೆ ಇಲಾಖೆಯಿಂದ ಅಥವಾ ಅನುಬರತ ಮಂಡಲ್ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಹೊರ ಬಂದಿಲ್ಲ. ಮಂಡಲ್ ಮತ್ತು ಅವರ ನಾಲ್ವರು ಸಂಬಂಧಿಕರಿಗೆ ಆದಾಯದ ಸಂಬಂಧ ನೋಟಿಸ್ ಜಾರಿ ಮಾಡಲಾಗಿದೆ. ಒಂದು ವಾರದೊಳಗೆ ನೋಟಿಸ್​ಗೆ ಉತ್ತರಿಸಿವಂತೆ ಗಡುವು ನೀಡಲಾಗಿದೆ ಎಂದಿವೆ.

ಈ ಸುದ್ದಿಯು ರಾಜ್ಯದ ರಾಜಕೀಯ ವಲಯದಲ್ಲಿ ಹೊಸ ಅಲೆ ಸೃಷ್ಟಿಸಿದೆ. ಬಿರ್ಭುಮ್ ಜಿಲ್ಲೆಯ ಚುನಾವಣೆಗೆ ಸ್ವಲ್ಪ ಮುಂಚೆ ಈ ಬೆಳವಣಿಗೆ ನಡೆದಿದ್ದರ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಲಾಗುತ್ತಿದೆ.

ಇದಕ್ಕೂ ಮುನ್ನ ಬಿಜೆಪಿಯ ಹಿರಿಯ ಮುಖಂಡರು ಬಿರ್ಭಮ್ ಜಿಲ್ಲೆಯಲ್ಲಿ ನಡೆದ ಸಮಾವೇಶದಲ್ಲಿ ಟಿಎಂಸಿಯ ಅನುಬರತ ಮಂಡಲ ಅವರ ಸಂಪತ್ತು ಮತ್ತು ಆಸ್ತಿ ಗಳಿಕೆ ಕುರಿತು ಪ್ರಶ್ನೆಗಳನ್ನು ಎತ್ತಿದ್ದರು.

ಇತ್ತೀಚೆಗೆ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಬಿರ್ಭಮ್ ಜಿಲ್ಲೆಯ ಇಲಾಂಬಜಾರ್‌ನಲ್ಲಿ ನಡೆದ ಪ್ರಚಾರದಲ್ಲಿ ಪಾಲ್ಗೊಂಡು, ಮಂಡಲ್ ವಿರುದ್ಧ ಆರೋಪಗಳನ್ನು ಹೊರಿಸಿದ್ದರು.

Last Updated : Apr 23, 2021, 6:43 PM IST

ABOUT THE AUTHOR

...view details