ಚೆನ್ನೈ (ತಮಿಳು ನಾಡು): ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ಸಂಶೋಧಕರು ಧ್ವನಿ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಮೊಬೈಲ್ ಪೇಮೆಂಟ್ ಫೋರಮ್ ಆಫ್ ಇಂಡಿಯಾ (ಎಂಪಿಎಫ್‌ಐ) ಸದಸ್ಯರೊಂದಿಗೆ ಸಹಕರಿಸಲಿದ್ದಾರೆ. ಇದು ಭಾರತದಲ್ಲಿ ಡಿಜಿಟಲ್ ಪಾವತಿಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ಮಾತ್ರವಲ್ಲದೇ ಸಂಶೋಧನಾ ಅವಕಾಶಗಳಿಗೂ ಒಂದು ಅದ್ಭುತ ವೇದಿಕೆ ಒದಗಿಸುತ್ತದೆ.
ಪ್ರಸ್ತುತ, ಭಾರತ ಸರ್ಕಾರದ ಅಂಕಿ- ಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ ತಿಂಗಳು 100 ದಶಲಕ್ಷಕ್ಕೂ ಹೆಚ್ಚು ಸಕ್ರಿಯ ಯುಪಿಐ ಬಳಕೆದಾರರಿದ್ದಾರೆ. 2025ರ ವೇಳೆಗೆ ಯುಪಿಐ ಪಾವತಿ ಪ್ಲಾಟ್‌ಫಾರ್ಮ್‌ಗಳಿಗೆ 500 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಕರೆತರುವ ನಿಟ್ಟಿನಲ್ಲಿ ಎಂಪಿಎಫ್‌ಐ ಈ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಭಾರತ ಸರ್ಕಾರ ಕಳೆದ ಬಜೆಟ್‌ನಲ್ಲಿ 1,500 ಕೋಟಿ ರೂಗಳನ್ನು ದೇಶದಲ್ಲಿ ಡಿಜಿಟಲ್ ಪಾವತಿಯನ್ನು ಅಳವಡಿಸಿಕೊಳ್ಳಲು ನಿಗದಿಪಡಿಸಿದೆ. ಐಐಟಿ ಮದ್ರಾಸ್‌ನ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಅಧ್ಯಾಪಕ ಡಾ. ಗೌರವ್ ರೈನಾ ಅವರು ಎಂಪಿಎಫ್‌ಐ ಅಧ್ಯಕ್ಷರಾಗಿದ್ದಾರೆ. ಪ್ರತಿಯೊಬ್ಬರನ್ನು ಮೊಬೈಲ್ ಪಾವತಿ ಮತ್ತು ಮೊಬೈಲ್ ಹಣಕಾಸು ಸೇವೆಗಳನ್ನು ಸಕ್ರಿಯಗೊಳಿಸುವುದು ಎಂಪಿಎಫ್‌ಐ ಉದ್ದೇಶವಾಗಿದೆ.
ಈ ಕುರಿತು ಮಾತನಾಡಿದ ಡಾ. ಗೌರವ್ ರೈನಾ, "ಡಿಜಿಟಲ್ ಮತ್ತು ಮೊಬೈಲ್ ಪಾವತಿಗಳು ಸಂಪರ್ಕವಿಲ್ಲದ ಪಾವತಿಗಳಾಗಿದ್ದು, ಕೋವಿಡ್-19 ಅಪಾಯ ತಗ್ಗಿಸಲು ಸಹಾಯ ಮಾಡಲಿದೆ. ಇದು ನಿಮಗೆ ಮತ್ತು ಪರಿಸರ ವ್ಯವಸ್ಥೆಗೆ ಸಹಾಯ ಮಾಡಲು ಉತ್ತಮ ಅವಕಾಶ ಒದಗಿಸುತ್ತದೆ." ಎಂದು ಹೇಳಿದರು.
ಭಾರತದಲ್ಲಿ ಡಿಜಿಟಲ್ ಪಾವತಿಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವಲ್ಲಿ ಚಿಂತನೆಯ ನಾಯಕತ್ವ ಒದಗಿಸುವುದು ಐಐಟಿ ಮದ್ರಾಸ್‌ನ ಪಾತ್ರವಾಗಿದೆ. ಉತ್ತಮ ಹಾಗೂ ಸುರಕ್ಷಿತ ತಂತ್ರಜ್ಞಾನದ ಅವಕಾಶಗಳನ್ನು ನೀಡುವುದು ಇದರ ಪ್ರಮುಖ ಪಾತ್ರವಾಗಲಿದೆ.
ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಅಪ್ಲಿಕೇಶನ್‌ಗಳು ಈಗಾಗಲೇ ಅನೇಕ ಭಾಷೆಗಳಲ್ಲಿ ಲಭ್ಯವಿದೆ. ಯುಪಿಐ ಎಂಬುದು ದೇಶದಲ್ಲಿ ಅಂತರ್ಬ್ಯಾಂಕ್ ವಹಿವಾಟಿಗೆ ಅನುಕೂಲವಾಗುವಂತೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅಭಿವೃದ್ಧಿಪಡಿಸಿದ ತ್ವರಿತ ನೈಜ-ಸಮಯ ಪಾವತಿ ವ್ಯವಸ್ಥೆಯಾಗಿದೆ.
ಎಂಪಿಎಫ್‌ಐನ ಪ್ರಮುಖ ಶಿಫಾರಸುಗಳು
ಮಾನವ ನಡವಳಿಕೆ ಮತ್ತು ಅಳವಡಿಸಿಕೊಳ್ಳುವಿಕೆ: