ಸಿಯೋಲ್(ದಕ್ಷಿಣ ಕೊರಿಯಾ): ವಾಹನ ತಯಾರಿಕಾ ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರ್ ಮತ್ತು ಅದರ ಅಂಗಸಂಸ್ಥೆಯಾಗಿರುವ ಕಿಯಾ ಮೋಟಾರ್ಸ್ ಮುಂದಿನ ಹಲವು ವಾರಗಳವರೆಗೆ ಬಿಡಿಭಾಗಗಳ ಉತ್ಪಾದನಾ ಘಟಕ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.
ಚಿಪ್ಸೆಟ್ ಬಿಡಿಭಾಗಗಳಲ್ಲಿ ಕೊರತೆ ಉಂಟಾದ ಹಿನ್ನೆಲೆ ಟಕ್ಸನ್ ಸ್ಪೋರ್ಟ್ ಯುಟಿಲಿಟಿ ವಾಹನ ಮತ್ತು ನೆಕ್ಸೋ ಹೈಡ್ರೋಜನ್ ಇಂಧನ ಹಾಗೂ ಎಲೆಕ್ಟ್ರಿಕ್ ವಾಹನ ಉತ್ಪಾದಿಸುವ 5ನೇ ನಂಬರ್ನ ಉಲ್ಸಾನ್ ಸ್ಥಾವರ ಮುಂದಿನ ಸೋಮವಾರದಿಂದ ಸ್ಥಗಿತಗೊಳಿಸಲು ಮುಂದಾಗಿದೆ.
ಏಪ್ರಿಲ್ 7-14ರವರೆಗ ಹ್ಯುಂಡೈ ಸಂಸ್ಥೆಯು ಕೋನಾ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ಐಒನಿಕ್ 5 ಎಲೆಕ್ಟ್ರಿಕ್ ಕಾರನ್ನು ತಯಾರಿಸುವ ನಂ.1 ಉಲ್ಸಾನ್ ಸ್ಥಾವರವನ್ನು ಬಂದ್ ಮಾಡಿತ್ತು.
ಅಲ್ಲದೆ ಮೇ6-7ರಂದು ಪಿಕ್ಅಪ್ ಟ್ರಕ್ ಉತ್ಪಾದಿಸುವ ಉಲ್ಸಾನ್ 4 ಸ್ಥಾವರವನ್ನು ಎಲೆಕ್ಟ್ರಾನಿಕ್ ಉಪಕರಣಗಳ ಕೊರತೆಯಿಂದ ಬಂದ್ ಮಾಡಿದೆ.
ಇದಿಷ್ಟೇ ಅಲ್ಲದೆ ಸೋನಾಟಾ ಮತ್ತು ಗ್ರ್ಯಾಂಡೂರ್ ಸೆಡಾನ್ಗಳನ್ನು ಬಿಡಿಭಾಗ ತಯಾರಾಗುವ ಘಟಕವನ್ನು ಏಪ್ರಿಲ್ 12-13 ಹಾಗೂ ಏಪ್ರಿಲ್ 19-20 ದಿನದಲ್ಲಿ ಸ್ಥಗಿತಗೊಳಿಸಲಾಗಿತ್ತು.