ನವದೆಹಲಿ:15ನೇ ಹಣಕಾಸು ಆಯೋಗ ಶಿಫಾರಸು ಮಾಡಿದಂತೆ ಆದಾಯ ಕೊರತೆ ಅನುದಾನದ 4ನೇ ಸಮ ಮಾಸಿಕ ಕಂತಿನಡಿ 2020ರ ಜುಲೈ 8ರಂದು 14 ರಾಜ್ಯಗಳಿಗೆ 6,195.08 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಇದರಲ್ಲಿ ಕರ್ನಾಟಕವನ್ನು ಕಡೆಗಣಿಸಿದಂತೆ ಕಾಣುತ್ತಿದೆ.
14 ರಾಜ್ಯಗಳಿಗೆ ₹ 6,195 ಕೋಟಿ ಅನುದಾನ: ಕರ್ನಾಟಕವನ್ನು ಕಡೆಗಣಿಸಿದ ಕೇಂದ್ರ?
15ನೇ ಹಣಕಾಸು ಆಯೋಗವು ಶಿಫಾರಸು ಮಾಡಿದಂತೆ ಆದಾಯ ಕೊರತೆ ಅನುದಾನದ 4ನೇ ಸಮ ಮಾಸಿಕ ಕಂತಿನಡಿ 2020ರ ಜುಲೈ 8ರಂದು 14 ರಾಜ್ಯಗಳಿಗೆ 6,195.08 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.
ಹಣಕಾಸು ಸಚಿವಾಲಯ
15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಹಂಚಿಕೆ ನಂತರದ ಆದಾಯ ಕೊರತೆ ಅನುದಾನದ 4ನೇ ಮಾಸಿಕ ಕಂತಿನಲ್ಲಿ ಕೇಂದ್ರ ಸರ್ಕಾರ ಇಂದು 14 ರಾಜ್ಯಗಳಿಗೆ 6,195.08 ಕೋಟಿ ರೂ. ಬಿಡುಗಡೆ ಮಾಡಿದೆ. ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಹಣ ಹೆಚ್ಚುವರಿ ಸಂಪನ್ಮೂಲ ಕ್ರೋಢೀಕರಣಕ್ಕೆ ನೆರವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವರ ಕಚೇರಿ ತಿಳಿಸಿದೆ.
ಆಂಧ್ರ ಪ್ರದೇಶ, ಅಸ್ಸೊಂ, ಹಿಮಾಚಲ ಪ್ರದೇಶ, ಕೇರಳ, ಮಣಿಪುರಂ, ಮೇಘಾಲಯ, ಮಿಜೊರಂ, ನಾಗಲ್ಯಾಂಡ್, ಪಂಜಾಬ್, ತಮಿಳುನಾಡು, ತ್ರಿಪುರ, ಉತ್ತರಾಖಂಡ್ ಹಾಗೂ ಪಶ್ಚಿಮ ಬಂಗಾಳಕ್ಕೆ ಅನುದಾನ ಹಂಚಿಕೆ ಮಾಡಿದೆ.