ರಿಯಾದ್: ಪ್ರಸ್ತುತ ಭಾರತದಲ್ಲಿ ಉದ್ಬವಿಸಿರುವ ಆರ್ಥಿಕ ಕುಸಿತ ತಾತ್ಕಾಲಿಕವಷ್ಟೇ, ಅದು ಸದ್ಯವೇ ಚೇತರಿಕೊಂಡು ಸರಿಯಾದ ಹಳಿಗೆ ಬರಲಿದೆ ಎಂದು ದೇಶದ ನಂಬರ್ ಒನ್ ಉದ್ಯಮಿ ಮುಖೇಶ್ ಅಂಬಾನಿ ಹೇಳಿದ್ದಾರೆ.
ಭಾರತದಲ್ಲಿನ ಆರ್ಥಿಕ ಕುಸಿತದ ಬಗ್ಗೆ ದೇಶದ ನಂಬರ್ ಒನ್ ಶ್ರೀಮಂತ ಹೇಳಿದ್ದೇನು? - ಮುಖೇಶ್ ಅಂಬಾನಿ
ಸೌದಿ ಅರೇಬಿಯಾದ ವಾರ್ಷಿಕ ಬಂಡವಾಳ ಹೂಡಿಕೆ ಫೋರಂನಲ್ಲಿ ಮಾತನಾಡಿದ ರಿಲಯನ್ಸ್ ಸಮೂಹ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ, ಭಾರತದಲ್ಲಿ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಕುಸಿದಿರುವುದು ನಿಜ. ಆರ್ಥಿಕ ಸುಧಾರಣಾ ಕ್ರಮಗಳನ್ನ ಕಳೆದ ಕೆಲ ತಿಂಗಳಿಂದ ತೆಗೆದುಕೊಳ್ಳಲಾಗುತ್ತಿದೆ. ಈ ಕುಸಿತ ತಾತ್ಕಾಲಿಕವಷ್ಟೆ. ಇನ್ನೂ ಕೆಲವು ದಿನಗಳಲ್ಲಿ ಭಾರತದ ಆರ್ಥಿಕತೆ ಚೇತರಿಸಿಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೌದಿ ಅರೇಬಿಯಾದ ವಾರ್ಷಿಕ ಬಂಡವಾಳ ಹೂಡಿಕೆ ಫೋರಂನಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈ ಸಂಬಂಧ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಇದರ ಫಲ ಇನ್ನು ಕೆಲ ತಿಂಗಳುಗಳಲ್ಲಿ ಗೋಚರಿಸಲಿದೆ. ಮುಂದಿನ ತ್ರೈಮಾಸಿಕದಲ್ಲಿ ಈ ಬಗ್ಗೆ ಉತ್ತರ ಸಿಗಲಿದೆ ಎಂದು ಅಂಬಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಭಾರತದಲ್ಲಿ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಕುಸಿದಿರುವುದು ನಿಜ. ಇನ್ನು ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಇದು ತಾತ್ಕಾಲಿಕ ಎಂದರು. ಎಲ್ಲ ಆರ್ಥಿಕ ಸುಧಾರಣಾ ಕ್ರಮಗಳನ್ನ ಕಳೆದ ಕೆಲ ತಿಂಗಳಿಂದ ತೆಗೆದುಕೊಳ್ಳಲಾಗುತ್ತಿದೆ. ಅದಕ್ಕೆ ಸಮಯ ಬೇಕಾಗುತ್ತದೆ. ಶೀಘ್ರವೇ ಆರ್ಥಿಕ ಸ್ಥಿತಿ ತನ್ನ ಹಿಂದಿನ ಲಯಕ್ಕೆ ಮರಳಲಿದೆ ಎಂದು ಮುಕೇಶ್ ಅಂಬಾನಿ ಅಭಿಪ್ರಾಯಪಟ್ಟರು.