ಕರ್ನಾಟಕ

karnataka

ETV Bharat / business

ಬೆಂಗಳೂರಲ್ಲಿ ಏಷ್ಯಾದ ಅತಿದೊಡ್ಡ ಏರ್‌​ ಶೋ: ಗೇಮ್​ ಚೇಂಜರ್ ರಫೇಲ್​ ಭಾಗವಹಿಸುತ್ತಾ? - ಕೊರೊನಾ ವೈರಸ್

ಭಾರತದ ಪಾರಂಪರಿಕ ತಾಣವಾದ ಬೆಂಗಳೂರಿನಲ್ಲಿ ಮುಂದಿನ ವರ್ಷ ಫೆಬ್ರವರಿ 3ರಿಂದ 5ರ ತನಕ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

rafael
ರಫೇಲ್​ ಫೈಟರ್

By

Published : Aug 28, 2020, 9:28 PM IST

ನವದೆಹಲಿ: ಮುಂದಿನ ಆವೃತ್ತಿಯ ಏಷ್ಯಾದ ಅತಿದೊಡ್ಡ ಏರೋ ಇಂಡಿಯಾ ಪ್ರದರ್ಶನವನ್ನು ಬೆಂಗಳೂರಿನಲ್ಲಿ ನಡೆಸಲು ರಕ್ಷಣಾ ಸಚಿವಾಲಯ ತಾತ್ವಿಕ ನಿರ್ಧಾರ ತೆಗೆದುಕೊಂಡಿದೆ.

ಭಾರತದ ಪಾರಂಪರಿಕ ತಾಣವಾದ ಬೆಂಗಳೂರಿನಲ್ಲಿ ಮುಂದಿನ ವರ್ಷ ಫೆಬ್ರವರಿ 3ರಿಂದ 5ರ ತನಕ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ದೇಶೀಯ ರಕ್ಷಣಾ ಉದ್ಯಮ ಮತ್ತು ಜಾಗತಿಕ ಏರೋಸ್ಪೇಸ್ ಸಂಸ್ಥೆಗಳ ಒತ್ತಾಸೆಯ ಮೇರೆಗೆ ಪ್ರತಿ ಎರಡು ವರ್ಷಗಳಿಗೆ ಒಮ್ಮೆ ಏರ್​ ಶೋ ನಡೆಸಿಕೊಂಡು ಬರಲಾಗುತ್ತಿದೆ ಎಂದು ಸಚಿವಾಲಯ ಹೇಳಿದೆ.

ದೊಡ್ಡ ವೈಮಾನಿಕ ಪ್ರದರ್ಶನ ಆಯೋಜಿಸುವ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈಗಾಗಲೇ ಹಲವು ಆಂತರಿಕ ಸಭೆಗಳನ್ನು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಕ್ಷಣಾ ಸಚಿವರ ಸಭೆ

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಗರಿಷ್ಠ ಮಟ್ಟದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಏರ್​ ಶೋ ಆಯೋಜಿಲು ನಿರ್ಧರಿಸಲಾಯಿತು ಎಂದು ಹೇಳಿವೆ.

1996ರಲ್ಲಿ ಪ್ರಾರಂಭವಾದಾಗಿನಿಂದ ಬೆಂಗಳೂರು ಈ ಕಾರ್ಯಕ್ರಮಕ್ಕೆ ಆತಿಥ್ಯ ವಹಿಸಿಕೊಂಡು ಬರುತ್ತಿದೆ. ಹಲವು ದೇಶಗಳ ನಿಯೋಗಗಳಲ್ಲದೆ ಜಾಗತಿಕ ರಕ್ಷಣಾ ಸಂಸ್ಥೆಗಳು ಮತ್ತು ದೊಡ್ಡ ಹೂಡಿಕೆದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂದರ್ಭದಲ್ಲಿ ಭಾರತದ ರಕ್ಷಣಾ ಉತ್ಪಾದನೆಯನ್ನು ಉತ್ತೇಜಿಸುವಲ್ಲಿ ರಕ್ಷಣಾ ಸಚಿವಾಲಯ ತನ್ನ ಉಪಕ್ರಮಗಳನ್ನು ಪ್ರದರ್ಶಿಸಲು ಯೋಜನೆ ಹಾಕಿಕೊಂಡಿದೆ.

ಜಾಗತಿಕವಾಗಿ ಭಾರತ ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿದೆ. ಅಂದಾಜಿನ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಸುಮಾರು 130 ಶತಕೋಟಿ ಡಾಲರ್ ಖರ್ಚು ಮಾಡುವ ನಿರೀಕ್ಷೆಯಿದೆ. ಕೇಂದ್ರವು ಆಮದು ಮಾಡಿಕೊಳ್ಳುವ ಮಿಲಿಟರಿ ಉಪಕರಣಗಳ ಅವಲಂಬನೆ ಕಡಿಮೆ ಮಾಡಲು ಬಯಸಿದ್ದು, ದೇಶಿಯ ರಕ್ಷಣಾ ಉತ್ಪಾದನೆ ಪ್ರೋತ್ಸಾಹಿಸುತ್ತಿದೆ.

ಮುಂದಿನ ಐದು ವರ್ಷಗಳಲ್ಲಿ ರಕ್ಷಣಾ ಉತ್ಪಾದನೆಯಲ್ಲಿ 25 ಬಿಲಿಯನ್ ಡಾಲರ್ (1.75 ಲಕ್ಷ ಕೋಟಿ ರೂ.) ವಹಿವಾಟು ನಡೆಸುವ ಗುರಿಯನ್ನು ರಕ್ಷಣಾ ಸಚಿವಾಲಯ ಇರಿಸಿಕೊಂಡಿದೆ. ಇದರಲ್ಲಿ 5 ಬಿಲಿಯನ್ ಅಮೆರಿಕನ್ ಡಾಲರ್​ (35,000 ಕೋಟಿ ರೂ) ಮೌಲ್ಯದಷ್ಟು ಮಿಲಿಟರಿ ಯಂತ್ರಗಳ ರಫ್ತು ಗುರಿ ಇದೆ.

ಏರೋ ಇಂಡಿಯಾ ಶೋನಲ್ಲಿ ದೇಶೀಯ ಹಾಗೂ ವಿದೇಶಿ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲಿವೆ. ತೇಜಸ್‌, ಸುಖೋಯ್‌ ಸು-30ಎಂಕೆಐ, ಗ್ರಿಪನ್‌ ಫೈಟರ್‌ ಸೇರಿದಂತೆ ಹಲವು ಫೈಟರ್​ ಜೆಟ್​ಗಳು ಭಾಗವಹಿಸಲಿವೆ.

ಫ್ರಾನ್ಸ್​ನಲ್ಲಿ ತಯಾರಾಗಿ ಇತ್ತೀಚೆಗಷ್ಟೆ ಭಾರತಕ್ಕೆ ಬಂದ ಐದು ರಫೇಲ್ ಯುದ್ಧ ವಿಮಾನ ವಾಯುಪಡೆಗೆ ಸೆಪ್ಟೆಂಬರ್ 10ರಂದು ಅಧಿಕೃತವಾಗಿ ಸೇರ್ಪಡೆ ಆಗಲಿವೆ. ಈ ಫೈಟರ್ ಜೆಟ್​ಗಳು ಏರೋ ಶೋನಲ್ಲಿ ತಮ್ಮ ಕಸರತ್ತು ಪ್ರದರ್ಶಿಸಲಿವೆ ಎಂದು ಹಲವು ವೈಮಾನಿಕ ಹಾರಾಟ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.

ABOUT THE AUTHOR

...view details