ನ್ಯೂಯಾರ್ಕ್: ವಿಶ್ವದ ಯುವ ಜನಸಂಖ್ಯೆಯ ಅರ್ಧದಷ್ಟು ಜನರು ಆತಂಕ ಅಥವಾ ಖಿನ್ನತೆಗೆ ಒಳಪಟ್ಟಿರುತ್ತಾರೆ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಮೂರನೇ ಒಂದು ಭಾಗದಷ್ಟು ಜನರು ತಮ್ಮ ಭವಿಷ್ಯದ ವೃತ್ತಿಜೀವನದ ಕುರಿತು ಅನಿಶ್ಚಿತರಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಸಮೀಕ್ಷೆಯೊಂದು ತಿಳಿಸಿದೆ.
ಐಎಲ್‌ಒನ 'ಯುವ ಜನತೆ ಮತ್ತು ಕೋವಿಡ್ -19: ಉದ್ಯೋಗಗಳು, ಶಿಕ್ಷಣ, ಹಕ್ಕುಗಳು ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಪರಿಣಾಮಗಳು' ಸಮೀಕ್ಷೆಯಲ್ಲಿ ಈ ವಿಷಯ ತಿಳಿದುಬಂದಿದೆ. ತುರ್ತು ಕ್ರಮ ಕೈಗೊಳ್ಳದಿದ್ದರೆ ಯುವಕರು ಸಾಂಕ್ರಾಮಿಕ ರೋಗದಿಂದ ತೀವ್ರ ಮತ್ತು ದೀರ್ಘ ಕಾಲೀನ ಪ್ರತಿಕೂಲ ಪರಿಣಾಮಗಳನ್ನು ಅನುಭವಿಸುವ ಅಪಾಯವಿದೆ ಎಂದು ಎಚ್ಚರಿಸಿದೆ.
ಕೋವಿಡ್ -19 ರೋಗವು ಜೀವನದ ಪ್ರತಿಯೊಂದು ಅಂಶವನ್ನು ಅಸ್ತವ್ಯಸ್ತಗೊಳಿಸಿದೆ. ಬಿಕ್ಕಟ್ಟಿನ ಪ್ರಾರಂಭಕ್ಕೂ ಮುಂಚೆಯೇ ಯುವಜನರ ಸಾಮಾಜಿಕ ಮತ್ತು ಆರ್ಥಿಕ ಏಕೀಕರಣವು ನಿರಂತರವಾಗಿ ದೊಡ್ಡ ಸವಾಲಾಗಿತ್ತು.