ಮುಂಬೈ: ಷೇರುಪೇಟೆಯಲ್ಲಿ ಇಂದು ಮತ್ತೊಂದು ಸಾರ್ವಕಾಲಿಕ ದಾಖಲೆಯಾಗಿದೆ. ದಿನದ ವಹಿವಾಟಿನ ಆರಂಭದಲ್ಲೇ ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 400 ಅಂಕಗಳ ಜಿಗಿತದೊಂದಿಗೆ 56,526 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ ಕೂಡ 100 ಅಂಕಗಳ ಏರಿಕೆಯೊಂದಿಗೆ 16,806ರಲ್ಲಿದೆ.
ಮುಂಬೈ ಷೇರುಪೇಟೆ: ಸೆನ್ಸೆಕ್ಸ್ 400 ಅಂಕ ಜಿಗಿತ; ಮತ್ತೊಂದು ಸಾರ್ವಕಾಲಿಕ ದಾಖಲೆ - ಹೊಸ ದಾಖಲೆ ಬರೆದ ನಿಫ್ಟಿ
ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ಸ್ 400 ಅಂಕಗಳ ಜಿಗಿತ ಕಂಡು 56,526ಕ್ಕೆ ತಲುಪುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ನಿಫ್ಟಿ ಕೂಡ 16,806ಕ್ಕೆ ಏರಿಕೆಯೊಂದಿಗೆ ಹೊಸ ದಾಖಲೆ ಸೃಷ್ಟಿಸಿತು.
ಮುಂಬೈ ಷೇರು ಪೇಟೆಯಲ್ಲಿ ಸೆನ್ಸೆಕ್ಸ್ 400 ಅಂಕಗಳ ಜಿಗಿದು ಮತ್ತೊಂದು ಸಾರ್ವಕಾಲಿಕ ದಾಖಲೆ
ಟೈಟಾನ್, ಟಾಟಾ ಸ್ಟೀಲ್, ಮಾರುತಿ ಸುಜುಕಿ, ಎಂ ಆ್ಯಂಡ್ ಎಂ, ಏಷಿಯನ್ ಪೇಯಿಂಟ್ಸ್, ಎನ್‌ಟಿಪಿಸಿ, ಎಲ್ ಆ್ಯಂಡ್ ಟಿ, ಆರ್‌ಐಎಲ್, ಬಜಾಬ್ ಫೈನ್‌ಸರ್ವ್, ಭಾರತಿ ಏರ್‌ಟೆಲ್ ಷೇರುಗಳು ಲಾಭಗಳಿಸಿದವು. ಪವರ್ ಗ್ರೀಡ್ ಕಾರ್ಪೋರೇಷನ್ ಆಫ್ ಇಂಡಿಯಾದ ಷೇರುಗಳು ಮಾತ್ರ ನಷ್ಟ ಅನುಭವಿಸಿದವು.