ಜುರಿಚ್:ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ಬಿಲಿಯನೇರ್ ಸಂಪತ್ತು ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.
ಯುಬಿಎಸ್ ಮತ್ತು ಪಿಡಬ್ಲ್ಯೂಸಿ ಯ ವರದಿ ಪ್ರಕಾರ, ಸ್ಟಾಕ್ ಬೆಲೆಗಳು ಮತ್ತು ತಂತ್ರಜ್ಞಾನ ಮತ್ತು ಆರೋಗ್ಯ ರಕ್ಷಣೆಯಲ್ಲಿ ವಿಶ್ವದ ಶ್ರೀಮಂತರ ಸಂಪತ್ತು 10 ಟ್ರಿಲಿಯನ್ ಡಾಲರ್ (73 ಲಕ್ಷ ಕೋಟಿ ರೂ.) ಮೊತ್ತದಷ್ಟು ಹೆಚ್ಚಳವಾಗಿದೆ.
2,000ಕ್ಕೂ ಹೆಚ್ಚು ಶತಕೋಟ್ಯಧಿಪತಿಗಳನ್ನು ಒಳಗೊಂಡ ವರದಿಯಲ್ಲಿ ಒಟ್ಟು ಸಂಪತ್ತಿನ ಶೇ 98ರಷ್ಟು ಪ್ರತಿನಿಧಿಗಳಲ್ಲಿ ಏರಿಕೆಯಾಗಿದೆ. ಸಾಂಕ್ರಾಮಿಕ ರೋಗದ ಆರಂಭಿಕ ತಿಂಗಳುಗಳಲ್ಲಿ ಬಿಲಿಯನೇರ್ ಸಂಪತ್ತು ಕಾಲು ಭಾಗಕ್ಕಿಂತಲೂ ಹೆಚ್ಚಾಗಿದೆ. ಜುಲೈನಲ್ಲಿ 10.2 ಟ್ರಿಲಿಯನ್ ಡಾಲರ್ ತಲುಪಿದೆ. ಈ ಹಿಂದಿನ 2019ರ ಅಂತ್ಯದ ದಾಖಲೆಯಾದ 8.9 ಟ್ರಿಲಿಯನ್ ಡಾಲರ್ ಅಳಿಸಿಹಾಕಿದೆ.
ಈ ಅಂಕಿ -ಅಂಶವು ಕಳೆದ 25 ವರ್ಷಗಳಲ್ಲಿ 5ರಿಂದ 10 ಪಟ್ಟು ಹೆಚ್ಚಳವನ್ನು ತೋರಿಸುತ್ತಿದೆ. ಯುಬಿಎಸ್ ಮತ್ತು ಪಿಡಬ್ಲ್ಯೂಸಿ ದತ್ತಾಂಶದಲ್ಲಿ ಬಿಲಿಯನೇರ್ ಸಂಪತ್ತು ಕೇವಲ 1 ಟ್ರಿಲಿಯನ್ ಡಾಲರ್ಗಿಂತ ಹೆಚ್ಚಾಗಿದೆ.
ಈ ವರ್ಷದ ಏಪ್ರಿಲ್ 7 ಮತ್ತು ಜುಲೈ 31ರ ನಡುವೆ ಅಧ್ಯಯನದ ವ್ಯಾಪ್ತಿಯಲ್ಲಿ ಇದ್ದ ಪ್ರತಿ ಉದ್ಯಮದ ಶತಕೋಟ್ಯಧಿಪತಿಗಳ ಸಂಪತ್ತು ಎರಡು ಅಂಕಿಗಳಿಂದ ಏರಿಕೆಯಾಗಿದೆ. ತಂತ್ರಜ್ಞಾನ, ಆರೋಗ್ಯ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿನ ಶತಕೋಟ್ಯಧಿಪತಿಗಳು ಶೇ 36 - 44ರಷ್ಟು ಲಾಭ ಮಾಡಿಕೊಂಡಿದ್ದಾರೆ ಎಂಬುದು ವರದಿಯ ಉಲ್ಲೇಖ.
ಸಾಂಕ್ರಾಮಿಕವು ತಂತ್ರಜ್ಞಾನ ಮತ್ತು ಆರೋಗ್ಯ ಸಂಬಂಧಿತ ಉದ್ಯಮಿ ಮತ್ತು ಇತರ ವ್ಯಾಪಾರದ ಹೊಸ ಪ್ರವೃತ್ತಿಯನ್ನು ವೇಗಗೊಳಿಸಿತು. 2018ರಿಂದ 2020ರ ಜುಲೈವರೆಗೆ ಟೆಕ್ ಬಿಲಿಯನೇರ್‌ಗಳ ಸಂಪತ್ತು ಶೇ 42.5ರಷ್ಟು ಏರಿಕೆಯಾಗಿ 1.8 ಟ್ರಿಲಿಯನ್ ಡಾಲರ್‌ಗೆ ತಲುಪಿದೆ. ಆದರೆ ಆರೋಗ್ಯ ರಕ್ಷಣೆಯ ವಲಯದ ಶತಕೋಟ್ಯಧಿಪತಿಗಳ ಸಂಪತ್ತಿನಲ್ಲಿ ಶೇ 50.3ರಷ್ಟು ಏರಿಕೆಯಾಗಿ 658.6 ಬಿಲಿಯನ್ ಡಾಲರ್‌ಗೆ ತಲುಪಿದೆ.
ಕೋವಿಡ್-19 ಸಾಂಕ್ರಾಮಿಕ ರೋಗ ನಿಭಾಯಿಸಲು 2,000+ ಶತಕೋಟ್ಯಧಿಪತಿಗಳಲ್ಲಿ ಕೇವಲ 200ಕ್ಕೂ ಅಧಿಕ ಉದ್ಯಮಿಗಳು ಸಾರ್ವಜನಿಕರ ಕೊಡುಗೆಗೆ ಸುಮಾರು 7.2 ಬಿಲಿಯನ್ ಡಾಲರ್ (52 ಸಾವಿರ ಕೋಟಿ ರೂ.) ನೀಡಿದ್ದಾರೆ. ವೈದ್ಯಕೀಯ ಬಿಕ್ಕಟ್ಟು ಎದುರಿಸಲು ಬಿಲಿಯನೇರ್ ದೇಣಿಗೆ ಉಂಟುಮಾಡಿದ ಸಾಮಾಜಿಕ ಮತ್ತು ಆರ್ಥಿಕ ಗೊಂದಲುಗಳು ವಾಸ್ತವದಲ್ಲಿ ಹೆಚ್ಚಾಗಿದೆ.