ನವದೆಹಲಿ : ಅಂತಾರಾಷ್ಟ್ರೀಯ ತೈಲ ಬೆಲೆಗಳ ಕುಸಿತಕ್ಕೆ ಅನುಗುಣವಾಗಿ ಜೆಟ್ ಇಂಧನ (ಎಟಿಎಫ್) ಬೆಲೆಯನ್ನು ಶೇಕಡಾ 23 ರಷ್ಟು ಕಡಿತಗೊಳಿಸಲಾಗಿದೆ. ಇದರಿಂದಾಗಿ ಸದ್ಯ ಜೆಟ್ ಇಂಧನದ ಬೆಲೆ ಸಾಮಾನ್ಯವಾಗಿ ಬಳಸುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಮೂರನೆ ಒಂದು ಭಾಗದಷ್ಟಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಜೆಟ್ ಇಂಧನ ದರ ಶೇ.23ರಷ್ಟು ಇಳಿಕೆ
ರಾಷ್ಟ್ರ ರಾಜಧಾನಿಯಲ್ಲಿ ಏವಿಯೇಷನ್ ಟರ್ಬೈನ್ ಫ್ಯುಯೆಲ್ (ಎಟಿಎಫ್) ಬೆಲೆಯನ್ನು ಕಿಲೋ ಲಿಟರ್‌ಗೆ 6,812.62 ರೂ. ಅಥವಾ ಶೇಕಡಾ 23.2 ರಷ್ಟು ಕಡಿತಗೊಳಿಸಲಾಗಿದೆ. ಇದರಿಂದ ಪ್ರತಿ ಕಿಲೋ ಲೀಟರ್ಗೆ ಇಂಧನ ದರ 22,544.75 ರೂ.ಗಳಿಗೆ ಇಳಿದಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ಬೆಲೆ ಅಧಿಸೂಚನೆ ತಿಳಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಏವಿಯೇಷನ್ ಟರ್ಬೈನ್ ಫ್ಯುಯೆಲ್ (ಎಟಿಎಫ್) ಬೆಲೆಯನ್ನು ಕಿಲೋ ಲಿಟರ್‌ಗೆ 6,812.62 ರೂ. ಅಥವಾ ಶೇ 23.2 ರಷ್ಟು ಕಡಿತಗೊಳಿಸಲಾಗಿದೆ. ಇಂಧನ ದರ ಪ್ರತಿ ಕಿಲೋ ಲೀಟರ್ಗೆ 22,544.75 ರೂ.ಗಳಿಗೆ ಇಳಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ಬೆಲೆ ಅಧಿಸೂಚನೆ ತಿಳಿಸಿದೆ. ಇದರಿಂದಾಗಿ ಎಟಿಎಫ್ ಇಂಧನಕ್ಕೆ ಕಾರುಗಳು ಮತ್ತು ದ್ವಿಚಕ್ರ ವಾಹನಗಳಲ್ಲಿ ಬಳಸುವ ಪೆಟ್ರೋಲ್ ಬೆಲೆಯ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಖರ್ಚಾಗುತ್ತದೆ. ಸದ್ಯ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 69.59 ರೂ. ಇದೆ. ಜೆಟ್ ಇಂಧನ ಬೆಲೆ ಪ್ರತೀ ಲೀಟರ್ಗೆ 22.54 ರೂ. ಇದೆ.
ಮಾರುಕಟ್ಟೆಯ ಬೆಲೆಯ ಅಥವಾ ಸಬ್ಸಿಡಿ ರಹಿತ ಸೀಮೆಎಣ್ಣೆ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಗಿಂತ ಅಗ್ಗವಾಗಿದೆ. ಅದರ ದರವನ್ನು ಶೇ. 13.3 ರಷ್ಟು ಕಡಿತಗೊಳಿಸಿದ ನಂತರ ಪ್ರತಿ ಕಿಲೋ ಲೀಟರ್ಗೆ 39,678.47 ರೂ. ಮತ್ತು ಪ್ರತೀ ಲೀಟರ್ಗೆ 39.67 ರೂ. ಇದೆ. ಫೆಬ್ರವರಿಯಿಂದ ಎಟಿಎಫ್ ಬೆಲೆಯಲ್ಲಿ ಇದು 6ನೇ ಕಡಿತವಾಗಿದ್ದು, ಫೆಬ್ರವರಿಯಲ್ಲಿ ಇಂಧನ ದರ ಕಡಿತಗೊಳ್ಳಲು ಪ್ರಾರಂಭವಾಗುವ ಮೊದಲು ದೆಹಲಿಯಲ್ಲಿ ಎಟಿಎಫ್ ಬೆಲೆ ಪ್ರತಿ ಕಿಲೋ ಲೀಟರ್ಗೆ 64,323.76 ರೂ. ಮತ್ತು ಈಗ ಪ್ರತಿ ಕಿಲೋ ಲೀಟರ್ಗೆ 22,544.75 ರೂ. ಇದೆ.