ಕರ್ನಾಟಕ

karnataka

ETV Bharat / business

ಮೋದಿ ಆಡಳಿತ ಅಂತ್ಯದಲ್ಲಿ ಹಣಕಾಸು ಕೊರತೆ ಶೇ 134% ಏರಿಕೆ... ಪ್ರಧಾನಿಗೆ ಅಗ್ನಿ ಪರೀಕ್ಷೆ..!

ಪ್ರಧಾನಿ ನರೇಂದ್ರ ಮೋದಿ ಆಡಳಿತದ ಕೊನೆಯ ಅವಧಿಯ ಏಪ್ರಿಲ್ ಮತ್ತು ಫೆಬ್ರವರಿಯಲ್ಲಿ ಹಣಕಾಸು ಕೊರತೆ ₹ 8.51 ಲಕ್ಷ ಕೋಟಿ ಅಥವಾ ಶೇ 134.2ರಷ್ಟು ಏರಿಕೆಯಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.

ಹಣಕಾಸು ಕೊರತೆ

By

Published : Mar 29, 2019, 11:41 PM IST

ನವದೆಹಲಿ: ಎನ್​ಡಿಎ ಮೇಲೆ ಭಾರಿ ನಿರೀಕ್ಷೆ, ಅಪಾರ ಆರ್ಥಿಕ ಭರವಸೆ ಇರಿಸಿಕೊಂಡಿದ್ದ ಜನತೆಯ ಪಾಲಿಗೆ ದೊಡ್ಡ ನಿರಾಶೆಯ ಹಾಗೂ ಬೇಡವಾದ ಆರ್ಥಿಕ ಬದಲಾವಣೆ ಹರಡಿಕೊಂಡಿದೆ.

2020ರ ಹಣಕಾಸಿನ ವಾರ್ಷಿಕ ಬಜೆಟ್​ನಲ್ಲಿ ಸರ್ಕಾರ ಪರಿಷ್ಕರಿಸಿದ ಪ್ರಸ್ತುತ ಜಿಡಿಪಿ ಮೇಲಿನ ಹಣಕಾಸಿನ ಕೊರತೆಯ ಶೇ 3.4ರಷ್ಟು ಮೇಲ್ಮುಖವಾಗಿದೆ. ಈ ಹಿಂದೆ ಶೇ 3.3ರಷ್ಟು ಹಣಕಾಸು ಕೊರತೆ ಇರಲಿದೆ ಎಂದು ಅಂದಾಜಿಸಿತ್ತು.

ಇದು ನರೇಂದ್ರ ಮೋದಿ ಸರ್ಕಾರದ ಕುರಿತು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಜನತೆಯ ಪಾಲಿಗೆ ದೊಡ್ಡ ನಿರಾಶೆಯಷ್ಟೇ ಅಲ್ಲ, ಕೋಟ್ಯಾಂತರ ಮತದಾರರುಳ್ಳ ದೇಶದಲ್ಲಿ ಕಳವಳಕಾರಿ ಬೆಳವಣಿಗೆಯಾಗಿದೆ.

ಹಣಕಾಸು ವ್ಯವಹಾರಗಳ ಸಚಿವಾಲಯದ ಸುಭಾಷ್ ಚಂದ್ರ ಗಾರ್ಗ್ ಅವರು, ಹಣಕಾಸಿನ ಕೊರತೆಯ ಗುರಿ ಜಿಡಿಪಿಯ ಶೇ 3.4 ವಹಿವಾಟಿನಲ್ಲಿ ಕಾಯ್ದಿಡುವ ಭರವಸೆ ನೀಡಿದ್ದರು.

ಇದರ ಜೊತೆಗೆ ಪ್ರಸಕ್ತ ಸಾಲಿನ ತ್ರೈಮಾಸಿಕ ಚಾಲ್ತಿ ಖಾತೆ ಕೊರತೆಯ ಪ್ರಮಾಣವು ಶೇ 2.5ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿನ ವಹಿವಾಟಿನ ಕೊರತೆ ಎದುರಾಗಿತ್ತು. 2018ರ ತ್ರೈಮಾಸಿಕದ ಇದೇ ಅವಧಿಯಲ್ಲಿ ಹಣಕಾಸು ಕೊರತೆ ಪ್ರಮಾಣ 13.7 ಬಿಲಯನ್ ಡಾಲರ್​ನಿಂದ 16.9 ಬಿಲಯನ್​ ಡಾಲರ್​ಗೆ (ಶೇ 2.1ರಷ್ಟು) ಏರಿಕೆ ಆಗಿತ್ತು. ಈಗಿನ ತ್ರೈಮಾಸಿಕದಲ್ಲಿ ಇದು 19.1 ಬಿಲಿಯನ್​ (ಶೇ 2.9ರಷ್ಟು) ಹೆಚ್ಚಳವಾಗಿದೆ ಎಂದು ಆರ್​ಬಿಐ ತನ್ನ ಅಂಕಿಅಂಶಗಳ ಮೂಲಕ ತಿಳಿಸಿದೆ.

ವಾಸ್ತವದಲ್ಲಿ ಹಣಕಾಸು ಕೊರತೆ ಹೆಚ್ಚಾದಾಗ ಆರ್ಥಿಕತೆಯ ಆರೋಗ್ಯ ಸರಿಯಾಗಿಲ್ಲವೆಂದೇ ಲೆಕ್ಕ. ಇಂಥ ಬೇಡವಾದ ಬದಲಾವಣೆಯಾದಾಗ ವ್ಯಾಮೋಹದ ವಿವಾದ ಬದಿಗೆ ಸರಿದು ಆರ್ಥಿಕತೆಗೂ, ಅದನ್ನು ಸರಿಯಾಗಿ ನಿಭಾಯಿಸುವ ಭರವಸೆ ನೀಡಿದ ಸರ್ಕಾರಕ್ಕೂ ಪರೀಕ್ಷಾ ಕಾಲ ಬಂದಿದೆಯೆಂಬ ಭಾವನೆ ಹರಡಿಕೊಂಡಂತೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details