ಮುಂಬೈ: ಈಗಾಗಲೇ ರಾಷ್ಟ್ರೀಯ ತಂಡದಿಂದ ಅವಕಾಶ ವಂಚಿತರಾಗಿರುವ ಭಾರತದ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರಾದ ಯುವರಾಜ್ ಸಿಂಗ್ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿಯಾಗಲು ಆಲೋಚಿಸುತ್ತಿದ್ದಾರೆ.
ಒಂದು ಕಡೆ ರಾಷ್ಟ್ರೀಯ ತಂಡದಲ್ಲೂ ಅವಕಾಶವಿಲ್ಲ, ಇದೀಗ ಐಪಿಎಲ್ನಲ್ಲೂ ಅವಕಾಶ ವಂಚಿತರಾಗಿರುವ ಯುವಿ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿ ಐಸಿಸಿಯಿಂದ ಮಾನ್ಯತೆ ಪಡೆದಿರುವ ಟಿ-20 ಲೀಗ್ಗಳಲ್ಲಿ ಪಾಲ್ಗೊಳ್ಳಲು ಚಿಂತನೆ ನಡೆಸಿದ್ದಾರೆ.
ಬಿಸಿಸಿಐ ನಿಯಮದ ಪ್ರಕಾರ ದೇಶಿ ಅಥವಾ ರಾಷ್ಟ್ರೀಯ ತಂಡದಲ್ಲಿ ಸಕ್ರಿಯವಾಗಿರುವ ಆಟಗಾರ ವಿದೇಶಿ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ. ಆದ್ದರಿಂದ ಪ್ರಥಮ ದರ್ಜೆ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಪಡೆದು, ವಿದೇಶಿ ಟಿ-20 ಲೀಗ್ಗಳಲ್ಲಿ ತಮ್ಮ ಕ್ರಿಕೆಟ್ ಜೀವನದ 2ನೇ ಇನ್ನಿಂಗ್ಸ್ ಆರಂಭಿಸಲು ನಿರ್ಧರಿಸಿದ್ದಾರೆ.
ಯುವರಾಜ್ ಸಿಂಗ್ಗೆ ಗ್ಲೋಬಲ್ ಟಿ-20 ಲೀಗ್ ಹಾಗೂ ಡಬ್ಲಿನ್ ಮತ್ತು ಅಮ್ಸ್ಟೆಲ್ವಿನ್ ಲೀಗ್ಗಳಿಂದ ಕ್ರಿಕೆಟ್ ಆಡಲು ಆಫರ್ ಬಂದಿರುದರಿಂದ ಅನುಮತಿಗಾಗಿ ಬಿಸಿಸಿಐಗೆ ನಿವೃತ್ತಿಯ ಬೇಡಿಕೆ ಇಟ್ಟಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
ಒಂದು ವೇಳೆ ಯುವರಾಜ್ ಸಿಂಗ್ ನಿವೃತ್ತಿ ಘೋಷಿಸಿದರೆ ವಿಶ್ವದ ಪ್ರಸಿದ್ಧ ಟಿ-20 ಲೀಗ್ಗಳಾದ ಸಿಪಿಎಲ್, ಬಿಗ್ಬ್ಯಾಷ್, ಟಿ-20 ಬ್ಲಾಸ್ಟ್ನಂತಹ ಲೀಗ್ಗಳಲ್ಲಿ ಪಾಲ್ಗೊಳ್ಳಬಹುದಾಗಿದೆ.