ಮುಂಬೈ: ಮೇ 30 ರಿಂದ ಐಸಿಸಿ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಕಳೆದ 4 ವರ್ಷದಿಂದ ಆಟಗಾರರು ಯಾವ ರೀತಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪ್ರದರ್ಶನ ನೀಡಿದ್ದಾರೆ ಎಂಬುದರ ಮೇಲೆ ಟೀಂ ಇಂಡಿಯಾ ಆಟಗಾರರ ಆಯ್ಕೆ ನಿಂತಿದೆ ಹೊರತು ಐಪಿಎಲ್ನಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುವುದರಿಂದಲ್ಲ ಎಂದು ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.
ರಾಷ್ಟ್ರೀಯ ಆಯ್ಕೆಗಾರರು ವಿಶ್ವಕಪ್ನ 15 ಸದಸ್ಯರ ತಂಡದ ಆಯ್ಕೆಗಾಗಿ ಐಪಿಎಲ್ ನೋಡುತ್ತಿದ್ದಾರೆ. ಆದರೆ ಕ್ರಿಕೆಟ್ನ ಮೆಗಾ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡುವಾಗ ಐಪಿಎಲ್ನಂತಹ ಲೀಗ್ ನಲ್ಲಿ ತೋರುವ ಪ್ರದರ್ಶನ ಲೆಕ್ಕಕ್ಕೆ ಬರುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.