ಕರ್ನಾಟಕ

karnataka

ETV Bharat / briefs

ಮಹಿಳಾ ಟಿ-20 ಚಾಲೆಂಜ್: ವೆಲೋಸಿಟಿ ತಂಡಕ್ಕೆ ರೋಚಕ ಗೆಲುವು - ಟ್ರೈಲ್​​ಬ್ಲೇಜರ್ಸ್

ಮಹಿಳಾ ಟಿ-20 ಚಾಲೆಂಜ್​ನ ಎರಡನೇ ಪಂದ್ಯದಲ್ಲಿ ವೆಲೋಸಿಟಿ ಮೂರು ವಿಕೆಟ್​​ಗಳ ಟ್ರೈಲ್​ಬ್ಲೇಸರ್ಸ್​ ತಂಡವನ್ನು ಮಣಿಸಿದೆ.

ವೆಲೋಸಿಟಿ

By

Published : May 8, 2019, 10:38 PM IST

ಜೈಪುರ:ಮಹಿಳಾ ಟಿ-20 ಚಾಲೆಂಜ್​ನ ಎರಡನೇ ಪಂದ್ಯದಲ್ಲಿ ಮಿಥಾಲಿ ರಾಜ್​ ನೇತೃತ್ವದ ವೆಲೋಸಿಟಿ ತಂಡ ಮೂರು ವಿಕೆಟ್​ ಗೆಲುವು ಸಾಧಿಸಿದೆ.

ಟಾಸ್​ ಸೋತು ಬ್ಯಾಟಿಂಗ್​ ನಡೆಸಿದ ಟ್ರೈಲ್​​ಬ್ಲೇಜರ್ಸ್​ ತಂಡ ಆರಂಭದಲ್ಲೇ ನಾಯಕಿ ಸ್ಮೃತಿ ಮಂಧಾನರನ್ನು ಕಳೆದುಕೊಂಡಿತು. ಸುಜಿ ಬೇಟ್ಸ್ ಹಾಗೂ ಹರ್ಲಿನ್ ದಿಯೋಲ್​​​ 35 ರನ್​ಗಳ ಜೊತೆಯಾಟ ತಂಡಕ್ಕೆ ಕೊಂಚ ಸಹಾಯವಾಯಿತು.

ದಿಯೋಲ್​ 46 ರನ್​ಗಳ ನೆರವಿನಿಂದ ಟ್ರೈಲ್​ಬ್ಲೇಜರ್ಸ್​ ನಿಗದಿತ 20 ಓವರ್​​ನಲ್ಲಿ ಆರು ವಿಕೆಟ್ ನಷ್ಟಕ್ಕೆ 112 ರನ್​ಗಳ ಸಾಧಾರಣ ಮೊತ್ತ ದಾಖಲಿಸಿತು.

ಗುರಿ ಬೆನ್ನತ್ತಿದ ವೆಲೋಸಿಟಿ ತಂಡಕ್ಕೂ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕ ಆಟಗಾರ್ತಿ ಹ್ಯಾಲೆ ಮ್ಯಾಥ್ಯೂಸ್ ಐದು ರನ್ನಿಗೆ ಔಟಾದರು. ನಂತರ ಒಂದಾದ ಡೆನಿಯಲ್ ವ್ಯಾಟ್ ಹಾಗೂ ಶಫಾಲಿ ವರ್ಮಾ ಉತ್ತಮ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಎರಡು ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿದ್ದ ಸುಸ್ಥಿತಿಯಲ್ಲಿದ್ದ ವೆಲೋಸಿಟಿ ತಂಡಕ್ಕೆ ಟ್ರೈಲ್ ಬ್ಲೇಸರ್ಸ್​ ಶಾಕ್ ನೀಡಿದರು. ಇದೇ ಮೊತ್ತಕ್ಕೆ ವೆಲೋಸಿಟಿ ಬರೋಬ್ಬರಿ ಐದು ವಿಕೆಟ್ ಕಳದೆಕೊಂಡು ಸಂಕಷ್ಟ ಅನುಭವಿಸಿತು.

18 ಓವರ್​​ನಲ್ಲಿ ವೆಲೋಸಿಟಿ ಏಳು ವಿಕೆಟ್​ ಕಳೆದುಕೊಂಡು ಗುರಿ ಮುಟ್ಟಿತು. ಟ್ರೈಲ್​ಬ್ಲೇಸರ್ಸ್​ ಪರ ದೀಪ್ತಿ ಶರ್ಮ 14 ರನ್ನಿಗೆ 4 ವಿಕೆಟ್ ಕಿತ್ತು ಮಿಂಚಿದರು.

ABOUT THE AUTHOR

...view details