ಕರ್ನಾಟಕ

karnataka

ETV Bharat / briefs

ತನ್ನನ್ನು ಅಪ್ರಬುದ್ಧ ಎಂದ ರಬಾಡಗೆ ಬ್ಯಾಟ್​ನಿಂದಲೇ ಉತ್ತರ ನೀಡ್ತಾರಾ ಕೊಹ್ಲಿ!? - ವಿಶ್ವಕಪ್​

ವಾರದ ಹಿಂದಷ್ಟೇ ಕೊಹ್ಲಿ ಕುರಿತು ಹೇಳಿಕೆ ನೀಡಿದ್ದ ರಬಾಡ, ನಾನು ಐಪಿಎಲ್‌ನಲ್ಲಿ ಕೊಹ್ಲಿ ವಿರುದ್ಧ ಆಡಿದ್ದೇನೆ. ಅಗ್ರೆಸ್ಸಿವ್​​​ ಆಗಿ ಆಡುತ್ತಾರೆ. ಆದರೆ ಎದುರಾಳಿಗಳ ನಿಂದನೆಯ್ನನ್ನು ಸಹಿಸುವುದಿಲ್ಲ. ಕೊಹ್ಲಿ ಅಪ್ರಬುದ್ಧ ಎಂದು ಟೀಕಿಸಿದ್ದರು.

kohli

By

Published : Jun 5, 2019, 9:35 AM IST

ಸೌತಮ್​ಟನ್​: ಪ್ರಸ್ತುತ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ಮಿಂಚುತ್ತಿರುವ ಕೊಹ್ಲಿಯನ್ನು ಅಪ್ರಬುದ್ಧ ಎಂದಿದ್ದ ರಬಾಡ ಟೀಕೆಗೆ ಅವರ ಬಳಿಯೇ ನೇರವಾಗಿ ಚರ್ಚಿಸುತ್ತೇನೆ ಎಂದು ಕೊಹ್ಲಿ ಉತ್ತರಿಸಿದ್ದಾರೆ.

ವಾರದ ಹಿಂದಷ್ಟೇ ಕೊಹ್ಲಿ ಕುರಿತು ಹೇಳಿಕೆ ನೀಡಿದ್ದ ರಬಾಡ, ನಾನು ಐಪಿಎಲ್‌ನಲ್ಲಿ ಕೊಹ್ಲಿ ವಿರುದ್ಧ ಆಡಿದ್ದೇನೆ. ಅಗ್ರೆಸ್ಸಿವ್​​​ ಆಗಿ ಆಡುತ್ತಾರೆ. ಆದರೆ ಎದುರಾಳಿಗಳ ನಿಂದನೆ ಸಹಿಸುವುದಿಲ್ಲ. ಕೊಹ್ಲಿ ಅಪ್ರಬುದ್ಧ ಎಂದು ಟೀಕಿಸಿದ್ದರು.

ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಕೊಹ್ಲಿ, ಇದು ಮಾಧ್ಯಮದ ಮುಂದೆ ಚರ್ಚಿಸುವ ವಿಚಾರವಲ್ಲ. ರಬಾಡ ಒಬ್ಬ ಶ್ರೇಷ್ಠ ಬೌಲರ್ ಆಗಿದ್ದು, ಯಾವುದೇ ಹಂತದಲ್ಲಿ ವಿಕೆಟ್​ ಪಡೆಯುವ ಬೌಲರ್​ ಆಗಿದ್ದಾರೆ. ನನ್ನ ವಿರುದ್ಧ ಟೀಕೆಯ ಬಗ್ಗೆ ನೇರವಾಗಿ ಅವರ ಬಳಿಯೇ ಚರ್ಚಿಸಿ ಕಾರಣ ತಿಳಿದುಕೊಳ್ಳುತ್ತೇನೆ ಎಂದಿದ್ದಾರೆ.

ಅಗ್ರೆಸ್ಸಿವ್​ ಆಟಕ್ಕೆ ಹೆಸರಾದ ಕೊಹ್ಲಿ ರಬಾಡ ಟೀಕೆಯನ್ನು ಸಮಾಧಾನಕರವಾಗಿ ತೆಗೆದುಕೊಂಡಿದ್ದಾರೆಂದರೆ ಇಂದಿನ ಪಂದ್ಯದಲ್ಲಿ ರಬಾಡರ ಬೌಲಿಂಗ್​ ಹಾಗೂ ಕೊಹ್ಲಿ ಬ್ಯಾಟಿಂಗ್ ನೋಡಲು ಕ್ರಿಕೆಟ್​ ಅಭಿಮಾನಿಗಳು ಕಾದು ಕುಳಿತಿದ್ದಾರೆ.

ABOUT THE AUTHOR

...view details