ಕರ್ನಾಟಕ

karnataka

ETV Bharat / briefs

ಗಡ್ಚಿರೋಲಿ ದಾಳಿಗೆ ಪ್ರತೀಕಾರವಾಗಿ 100 ನಕ್ಸಲರನ್ನು ಕೊಲ್ತೀವಿ: ಸಿಎಂ ಯೋಗಿ - ಯೋಗಿ ಆದಿತ್ಯನಾಥ್

ಹುತಾತ್ಮ ಸಿಆರ್​ಪಿಎಫ್​ ಯೋಧರಿಗೆ ಯೋಗಿ ಆದಿತ್ಯನಾಥ್ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿ, ದೇಶದ 130 ಜನರಿಗಾಗಿ ಹೋರಾಡುತ್ತಿರುವ ಯೋಧರನ್ನು ನಾವು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶ ರಕ್ಷಣೆಗೆ ನಿಂತಿರುವ ವೀರ ಕಲಿಗಳನ್ನು ಕೊಂದ ಪಾಪ ಕೃತ್ಯವನ್ನು ಯಾರೂ ಕ್ಷಮಿಸುವುದಿಲ್ಲ.

ಯೋಗಿ

By

Published : May 2, 2019, 10:21 AM IST

ಲಖನೌ:ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ನಕ್ಸಲರ ದಾಳಿಗೆ 16 ಮಂದಿ ಸಿಆರ್​ಪಿಎಫ್​ ಯೋಧರು ಸಾವಿಗೀಡಾಗಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಹುತಾತ್ಮ ಸಿಆರ್​ಪಿಎಫ್​ ಯೋಧರಿಗೆ ಯೋಗಿ ಆದಿತ್ಯನಾಥ್ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿ, ದೇಶದ 130 ಜನರಿಗಾಗಿ ಹೋರಾಡುತ್ತಿರುವ ಯೋಧರನ್ನು ನಾವು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶ ರಕ್ಷಣೆಗೆ ನಿಂತಿರುವ ವೀರ ಕಲಿಗಳನ್ನು ಕೊಂದ ಪಾಪ ಕೃತ್ಯವನ್ನು ಯಾರೂ ಕ್ಷಮಿಸುವುದಿಲ್ಲ.

ಗಡ್ಚಿರೋಲಿ ದಾಳಿಯು ನಮ್ಮ ತಾಳ್ಮೆಯನ್ನು ಪರೀಕ್ಷಿಸಿದೆ. ನಾವು ಸಮ್ಮನಿರುವುದಿಲ್ಲ. ಇದಕ್ಕೆ ಪ್ರತೀಕಾರವಾಗಿ ನೂರು ನಕ್ಸಲರನ್ನು ಕೊಲ್ಲುತ್ತೇವೆ ಎಂದು ಅವರು ತಿಳಿಸಿದರು.

ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ನಕ್ಸಲರು ಸುಧಾರಕ ಸ್ಫೋಟಕಗಳನ್ನು ಬಳಸಿ ನಡೆಸಿದ ದಾಳಿಯಲ್ಲಿ ಹದಿನಾರು ಮಂದಿ ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದು, 15 ಮಂದಿ ಗಾಯಗೊಂಡಿದ್ದಾರೆ.

ABOUT THE AUTHOR

...view details