ಗುವಾಹಟಿ(ಅಸ್ಸೋಂ): ಇತ್ತೀಚೆಗೆ ವನ್ಯಪ್ರಾಣಿಗಳು ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕುತ್ತಿವೆ. ಇದೇನೂ ಹೊಸ ಸಂಗತಿಯಲ್ಲ. ಯಾಕಂದ್ರೆ, ಕಾಡು ನಾಶವಾಗ್ತಿದ್ದಂತೆ ಇದೆಲ್ಲಾ ಸಹಜವಾದ ಪ್ರತಿಕ್ರಿಯೆ. ಇವತ್ತು ಈಶಾನ್ಯ ರಾಜ್ಯ ಅಸ್ಸೋಂನ ರಾಜಧಾನಿಯಲ್ಲಿ ಆಗಿದ್ದೂ ಇದೆ.
ಆಹಾರ ಅರಸುತ್ತಾ ಕಾಡಿನಿಂದ ನಗರಕ್ಕೆ ಬಂದ ಗಜರಾಜನ ನೋಡಿ ಬೇಸ್ತುಬಿದ್ದ ಜನ! - ಆಹಾರ
ಏಕಾಏಕಿ ರಸ್ತೆಗೆ ನುಗ್ಗಿದ ಗಜರಾಜ ವಾಹನ ಸವಾರರಿಗೆ ತಲೆಬಿಸಿ ಮಾಡಿದ್ದು, ಆಹಾರ ಹುಡುಕಿಕೊಂಡು ರಸ್ತೆ ರಸ್ತೆ ಅಲೆದಾಡಿದ್ದಾನೆ.
ಗಜರಾಜ
ಇಲ್ಲಿನ ವನ್ಯಧಾಮದಿಂದ ಹೊರಬಂದ ಆನೆಯೊಂದು ಗುವಾಹಟಿಯಲ್ಲಿ ರಾಜಾರೋಷವಾಗಿ ಸುತ್ತಾಡಿದೆ. ರಸ್ತೆಯಲ್ಲೆಲ್ಲಾ ಗಜರಾಜ ಗಾಂಭೀರ್ಯದ ಹೆಜ್ಜೆ ಹಾಕುತ್ತಿದ್ದಂತೆ ಅನೆಯ ಹಿಂದೆ ಮುಂದೆ ನೂರಾರು ಜನ ನೋಡೋಕೆ ನಿಂತಿದ್ದರು. ಬಳಿಕ ಕಾಡಾನೆಗೆ ಅರಿವಳಿಕೆ ಔಷಧ ನೀಡಿ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಕಳುಹಿಸಿದರು. ಕುತೂಹಲಕಾರಿ ದೃಶ್ಯಾವಳಿ ಇಲ್ಲಿದೆ ನೋಡಿ.