ಕರ್ನಾಟಕ

karnataka

ETV Bharat / briefs

ಅನುಷ್ಕಾ ಮದ್ವೆ​ ಆದ್ಮೇಲೆ ತಮ್ಮ ನಾಯಕತ್ವದಲ್ಲಿ ಬದಲಾವಣೆಯಂತೆ: ವಿರಾಟ್​ ಮಾಹಿತಿ

ವಿಶ್ವಕಪ್​​ನಲ್ಲಿ ಅಬ್ಬರಿಸಲು ಸಜ್ಜಾಗಿರುವ ವಿರಾಟ್​ ಕೊಹ್ಲಿ, ತಮ್ಮ ನಾಯಕತ್ವದಲ್ಲಿ ಬದಲಾವಣೆಯಾಗಲು ಅನುಷ್ಕಾ ಕಾರಣ ಎಂದು ಹೇಳಿದ್ದಾರೆ.

By

Published : May 29, 2019, 10:32 AM IST

ವಿರುಷ್ಕಾ ಜೋಡಿ

ಲಂಡನ್​:ಮದುವೆ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಪ್ರಮುಖ ಘಟ್ಟ. ವ್ಯಕ್ತಿತ್ವದ ಏಳಿಗೆಯಲ್ಲೂವಿವಾಹ ಪ್ರಭಾವ ಬೀರುತ್ತದೆ ಎನ್ನುವುದನ್ನು ಯೂರೂ ಅಲ್ಲಗಳೆಯೋಕೆ ಸಾಧ್ಯವಿಲ್ಲ. ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಅನುಷ್ಕಾ ಕೈ ಹಿಡಿದ ಬಳಿಕ ಸಾಕಷ್ಟು ಬದಲಾವಣೆ ಕಂಡರಂತೆ.

ಮದುವೆಯಾಗಿ ಒಂದೂವರೆ ವರ್ಷದ ನಂತರ ಅನುಷ್ಕಾ ಶರ್ಮಾ ತಮ್ಮ ಜೀವನದಲ್ಲಿ ಬದಲಾವಣೆಯಾಗಲು ಹೇಗೆ ಕಾರಣವಾಗಿದ್ದಾರೆ ಎಂಬ ಮಾಹಿತಿಯನ್ನು ಕೊಹ್ಲಿ ರಿವೀಲ್​ ಮಾಡಿದ್ದಾರೆ.

ಮದುವೆಯಾದ ಬಳಿಕ ನಾನು ಹೆಚ್ಚು ಜವಾಬ್ದಾರಿ ತೆಗೆದುಕೊಂಡಿದ್ದು, ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ. ಸಣ್ಣ-ಪುಟ್ಟ ವಿಷಯಗಳ ಕುರಿತು ಹೆಚ್ಚು ವಿಚಾರ ಮಾಡುವಂತೆ ಮಾಡುತ್ತದೆ ಎಂದಿರುವ ಕೊಹ್ಲಿ, ಇದು ನನ್ನ ನಾಯಕತ್ವದ ಮೇಲೂ ಪರಿಣಾಮ ಬೀರಿದ್ದು,ಹಿಂದಿಗಿಂತಲೂ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಮಾಡಿದೆ. ಹೆಚ್ಚು ಹೆಚ್ಚು ಹೊಣೆಗಾರಿಕೆಗಳನ್ನು ಅರ್ಥಮಾಡಿಕೊಂಡಾಗ ಮಾತ್ರ ಓರ್ವ ಉತ್ತಮ ನಾಯಕನಾಗಲು ಸಾಧ್ಯ ಎಂದಿರುವ ಕೊಹ್ಲಿ, ಯಾವ ಕ್ಷಣದಲ್ಲಿ ಹೇಗೆ ನಿರ್ಧಾರ ಕೈಗೊಳ್ಳಬೇಕು ಎಂಬುದನ್ನ ತಿಳಿಸಿಕೊಟ್ಟಿದೆ ಎಂದಿದ್ದಾರೆ.

ಲಂಡನ್​ನಲ್ಲಿ ನಡೆಯುತ್ತಿರುವ ವಿಶ್ವಕಪ್​​ನಲ್ಲಿ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಭಾಗಿಯಾಗಿದ್ದು, ಈಗಾಗಲೇ ನಡೆದ ಎರಡು ಅಭ್ಯಾಸ ಪಂದ್ಯಗಳ ಪೈಕಿ, ಒಂದರಲ್ಲಿ ಸೋಲು ಕಂಡು, ಮತ್ತೊಂದರಲ್ಲಿ ಗೆಲುವು ದಾಖಲಿಸಿದ್ದಾರೆ. ಇನ್ನು ಕೊಹ್ಲಿ ಎರಡು ಪಂದ್ಯಗಳಿಂದ ಕ್ರಮವಾಗಿ 18 ಹಾಗೂ 47ರನ್​ಗಳಿಕೆ ಮಾಡಿದ್ದರು. ಜೂನ್​ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಮೊದಲ ಪಂದ್ಯವನ್ನಾಡಲಿದೆ.

ABOUT THE AUTHOR

...view details