ಕೋಲ್ಕತ್ತಾ:ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆರ್.ಅಶ್ವಿನ್, ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್ಮನ್ ಜಾಸ್ ಬಟ್ಲರ್ ಮಂಕಡ್ ರನೌಟ್ ಮಾಡಿದ್ದು ದೊಡ್ಡ ಚರ್ಚೆಗೆ ಕಾರಣವಾಗಿದ್ದು ಈಗ ಇತಿಹಾಸ.
ಮಂಕಡ್ ರನೌಟ್ ಅನ್ನು ಇಂದಿನ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮದೇ ಶೈಲಿಯಲ್ಲಿ ಅಣಕಿಸಿದ್ದು ಸದ್ಯ ಕ್ರಿಕೆಟ್ ಫ್ಯಾನ್ಸ್ ಗಮನ ಸೆಳೆಯುತ್ತಿದೆ.
18ನೇ ಒವರ್ ಎಸೆಯುತ್ತಿದ್ದ ಕೆಕೆಆರ್ ತಂಡದ ಸ್ಪಿನ್ನರ್ ಸುನಿಲ್ ನರೈನ್ ಕೊನೇ ಕ್ಷಣದಲ್ಲಿ ಚೆಂಡೆಯದೇ ವಾಪಾಸಾಗುತ್ತಾರೆ. ಆದರೆ ಕೊಹ್ಲಿ ಕ್ರೀಸ್ ತೊರೆದಿರಲಿಲ್ಲ. ನರೈನ್ ಚೆಂಡಿನೊಂದಿಗೆ ವಿಕೆಟ್ ಬಳಿ ಬರುತ್ತಿದ್ದಂತೆ ಕೊಹ್ಲಿ ಕುಳಿತುಕೊಂಡು ಬ್ಯಾಟ್ನಲ್ಲಿ ಕ್ರೀಸ್ ಮುಟ್ಟುತ್ತಾರೆ.
ಕೊಹ್ಲಿಯ ಈ ಹಾಸ್ಯವಾದ ವರ್ತನೆಯನ್ನು ಗಮನಿಸಿದ ನರೈನ್ ಯಾವುದೇ ರೀತಿಯಾಗಿ ಪ್ರತಿಕ್ರಿಯಿಸದೆ ತೆರಳುತ್ತಾರೆ. ಒಟ್ಟಿನಲ್ಲಿ ಮಂಕಡ್ ರನೌಟ್ ಅನ್ನು ಧೋನಿ, ವಾರ್ನರ್ ಬಳಿಕ ಕೊಹ್ಲಿ ಸಹ ಅಣಕಿಸಿದ್ದು ಈ ಬಾರಿಯ ಐಪಿಎಲ್ನ ಮೇಜರ್ ಹೈಲೈಟ್ ಎನ್ನಬಹುದು.