ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ 100 ಮಿಲಿಯನ್ ಫಾಲೋವರ್ಸ್ ಪಡೆದ ವಿಶ್ವದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರನ್ಗಳಿಕೆಯಲ್ಲಷ್ಟೇ ಅಲ್ಲ, ಜಾಲತಾಣದಲ್ಲೂ ಕೊಹ್ಲಿ ಕಿಂಗ್.. ಒಂದು ಆ್ಯಡ್ ಪೋಸ್ಟ್ ಮಾಡಲು 83 ಲಕ್ಷ ರೂ. - ICC
ಕೊಹ್ಲಿಗೆ ಇನ್ಟಾಗ್ರಾಮ್ನಲ್ಲಿ 33.6 ಮಿಲಿಯನ್ (3.36 ಕೋಟಿ), ಟ್ವಿಟರ್ನಲ್ಲಿ 29.5 ಮಿಲಿಯನ್ (2.95 ಕೋಟಿ) ಹಾಗೂ ಫೇಸ್ಬುಕ್ನಲ್ಲಿ 37 ಮಿಲಿಯನ್(3.7 ಕೋಟಿ)ಹಿಂಬಾಲಕರನ್ನು ಹೊಂದಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ 100 ಮಿಲಿಯನ್(10 ಕೋಟಿ) ಹಿಂಬಾಲಕರನ್ನು ಗಳಿಸಿಕೊಂಡಿದ್ದಾರೆ.
kohli
2018ರಲ್ಲಿ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾರೊಂದಿಗೆ ಕರ್ವ ಚೌತ್ ಹಬ್ಬದ ದಿನ ಶೇರ್ ಮಾಡಿದ್ದ ಫೋಟೋ 2,14796 ಲೈಕ್ ಪಡೆದುಕೊಂಡು ಭಾರತದಲ್ಲಿ ಅತಿ ಹೆಚ್ಚು ಲೈಕ್ ಪಡೆದ 2018 ರ ಫೋಟೋ ಎನಿಸಿಕೊಂಡಿತ್ತು. ಲೈಕ್ ಜೊತೆಗೆ ಅತಿ ಹೆಚ್ಚು ರೀಟ್ವೀಟ್ ಪಡೆಯುವ ಮೂಲಕ ಗೋಲ್ಡನ್ ಟ್ವೀಟ್ ಆಫ್ ದಿ ಇಯರ್ ಎಂಬ ದಾಖಲೆ ನಿರ್ಮಿಸಿತ್ತು.
ಕೊಹ್ಲಿ ತಮ್ಮ ಇನ್ಸ್ಟಗ್ರಾಮ್ನ ಒಂದು ಜಾಹಿರಾತು ಪೋಸ್ಟ್ಗೆ ಸುಮಾರು 83 ಲಕ್ಷ ರೂಪಾಯಿ ಪಡೆಯಲಿದ್ದಾರೆ.
Last Updated : May 20, 2019, 2:28 PM IST