ಬೆಂಗಳೂರು: ಲಾಕ್ಡೌನ್ ನಡುವೆಯೂ ದೇಶದಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ವಿರುದ್ದ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಮೈಸೂರು ಬ್ಯಾಂಕ್ ವೃತ್ತದ ನಡುರಸ್ತೆಯಲ್ಲಿ ಕುಳಿತು ಬೆಲೆ ಏರಿಕೆ ಖಂಡಿಸಿದರು.
ಲಾಕ್ಡೌನ್ ನಡುವೆಯೂ ಮೈಸೂರು ಬ್ಯಾಂಕ್ ವೃತ್ತದ ನಡುರಸ್ತೆಯಲ್ಲಿ ವಾಟಾಳ್ ಪ್ರತಿಭಟನೆ
ದೇಶದಲ್ಲಿ ನಿರಂತರವಾಗಿ ಇಂಧನ ದರ ಏರಿಕೆಯಾಗಿತ್ತಿರುವ ಹಿನ್ನೆಲೆ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಮೈಸೂರು ಬ್ಯಾಂಕ್ ವೃತ್ತದ ನಡುರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
Vatal nagraj protest in the middle of the Mysore Bank circle amid a lockdown
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನ ಕೂಡ ಆರೋಗ್ಯದ ದೃಷ್ಟಿಯಿಂದ ಪಾಸ್ ಮಾಡಬೇಕು ಹಾಗೆ ಪಿಯುಸಿ ರಿಪಿಟರ್ಸ್ ಹಾಗೂ ಖಾಸಗಿ ವಿದ್ಯಾರ್ಥಿಗಳನ್ನ ಪಾಸ್ ಮಾಡಬೇಕೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಒತ್ತಾಯಿಸಿದರು.
ನನ್ನ ವಿರುದ್ಧ ಬೇಕಿದ್ದರೆ ಎಫ್ಐಆರ್ ದಾಖಲಿಸಿ, ಜೈಲಿಗೆ ಕಳುಹಿಸಲಿ ಯಾವುದಕ್ಕೂ ಜಗ್ಗದೇ ವಿದ್ಯಾರ್ಥಿಗಳಿಗಾಗಿ ಹೋರಾಟ ನಡೆಸುತ್ತೇನೆ ಎಂದು ವಾಟಾಳ್ ಗುಡುಗಿದರು.
Last Updated : Jun 8, 2021, 7:49 PM IST