ಕರ್ನಾಟಕ

karnataka

ETV Bharat / briefs

ಪಾಕ್​​ ವಿರುದ್ಧ ಸರಣಿ ಜಯ... ಭಾರತ ಸೇರಿ ಇತರೆ ಟಾಪ್​​​ ತಂಡಗಳ ನಿದ್ದೆಗೆಡಿಸಿದ ಇಂಗ್ಲೆಂಡ್​​​

ವಿಶ್ವಕಪ್​ಗೂ ಮುನ್ನ ನಡೆದ ಮಹತ್ವದ ಸರಣಿಯಲ್ಲಿ ವಿಶ್ವಕಪ್ ​ಗೆಲ್ಲುವ ರೇಸ್​ನಲ್ಲಿರುವ ಇಂಗ್ಲೆಂಡ್,​ ಪಾಕಿಸ್ತಾನವನ್ನು 4-0 ಯಿಂದ ಮಣಿಸಿ ತಾನೂ ನಂ1 ತಂಡವೆಂದು ನಿರೂಪಿಸಿದೆ.

icc

By

Published : May 20, 2019, 9:12 AM IST

Updated : May 20, 2019, 9:28 AM IST

ಲೀಡ್ಸ್​: ಪಾಕಿಸ್ತಾನ ವಿರುದ್ಧ ಕೊನೆಯ ಏಕದಿನ ಪಂದ್ಯದಲ್ಲಿ 54 ರನ್​ಗಳಿಂದ ಗೆಲ್ಲುವ ಮೂಲಕ ಇಂಗ್ಲೆಂಡ್​ ಸರಣಿಯನ್ನು 4-0ಯಲ್ಲಿ ವಶಪಡಿಸಿಕೊಂಡಿದೆ.

ವಿಶ್ವಕಪ್​ಗೂ ಮುನ್ನ ನಡೆದ ಮಹತ್ವದ ಸರಣಿಯಲ್ಲಿ ವಿಶ್ವಕಪ್ ​ಗೆಲ್ಲುವ ರೇಸ್​ನಲ್ಲಿರುವ ಇಂಗ್ಲೆಂಡ್,​ ಪಾಕಿಸ್ತಾನವನ್ನು 4-0ಯಿಂದ ಮಣಿಸಿ ತಾನೂ ನಂ.1 ತಂಡವೆಂದು ನಿರೂಪಿಸಿದೆ.

ಕೊನೆಯ ಪಂದ್ಯದಲ್ಲಿ ಟಾಸ್​ ಗೆದ್ದ ಇಂಗ್ಲೆಂಡ್​ ಬ್ಯಾಟಿಂಗ್​ ಆಯ್ದುಕೊಂಡು 50 ಓವರ್​ಗಳಲ್ಲಿ 351 ರನ್ ​ಗಳಿಸಿತು. ಆರಂಭಿಕರಾದ ಜೇಮ್ಸ್​ ವಿನ್ಸ್​ 33, ಬೈರ್ಸ್ಟೋವ್​ 32, ರೂಟ್​ 84, ಮಾರ್ಗನ್​ 76, ಬಟ್ಲರ್​ 34, ಸ್ಟೋಕ್ಸ್​ 21 ಹಾಗೂ ಟಾಮ್​ ಕರ್ರನ್​ 29 ರನ್ ​ಗಳಿಸಿ ಉಪಯುಕ್ತ ಕೊಡುಗೆ ನೀಡಿದರು.

ಪಾಕಿಸ್ತಾನ ಪರ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ ಯುವ ಬೌಲರ್​ ಶಾಹೀನ್​ ಆಫ್ರಿದಿ 84 ರನ್ ನೀಡಿ​ ದುಬಾರಿಯಾದರೂ 4 ವಿಕೆಟ್​ ಪಡೆದು ಮಿಂಚಿದರು. ಇವರಿಗೆ ಸಾಥ್​ ನೀಡಿದ ಇಮಾದ್​ ವಾಸಿಂ 3 ವಿಕೆಟ್​, ಮೊಹಮ್ಮದ್​ ಹಸ್ನೈನ್​​​​ ಹಾಗೂ ಹಸನ್​ ಅಲಿ ತಲಾ ಒಂದು ವಿಕೆಟ್​ ಪಡೆದರು.

352 ರನ್​ಗಳ ಬೃಹತ್​​ ಮೊತ್ತ ಬೆನ್ನೆಟ್ಟಿದ ಪಾಕಿಸ್ತಾನ 3 ಓವರ್​ಗಳಾಗುವಷ್ಟರಲ್ಲಿ ಫಾಖರ್​ ಜಮಾನ್(0)​, ಅಬಿದ್​ ಅಲಿ(5) ಹಾಗೂ ಮೊಹಮ್ಮದ್​ ಹಫೀಜ್​ (0) ವಿಕೆಟ್​ ಕಳೆದುಕೊಂಡಿತು.

ನಂತರ ಒಂದಾದ ಬಾಬರ್​ ಅಜಂ(80)ಹಾಗೂ ನಾಯಕ ಸರ್ಫರಾಜ್ ಅಹ್ಮದ್​(97) ರನ್ ​ಗಳಿಸಿ ತಂಡವನ್ನ ಗೆಲುವಿನತ್ತ ಕೊಡೊಯ್ಯಲು ಪ್ರಯತ್ನಿಸಿದರಾದರೂ ನಿರ್ಣಾಯಕ ಹಂತದಲ್ಲಿ ರನ್​ ಕದಿಯಲು ಹೋಗಿ ರನ್​ಔಟ್​ ಆದರು.

ಕೊನೆಯಲ್ಲಿ ಆಸಿಫ್​ ಅಲಿ 22, ಇಮಾದ್​ ವಾಸಿಂ 25, ಹಸ್ನೈನ್​ 28 ಹಾಗೂ ಆಫ್ರಿದಿ 19 ರನ್​ ಗಳಿಸಿ ಗೆಲುವಿಗಾಗಿ ಮಾಡಿದ ಹೋರಾಟ ವಿಫಲವಾಯಿತು. ಪಾಕಿಸ್ತಾನ 46.5 ಓವರ್​ಗಳಲ್ಲಿ 297 ರನ್​ಗಳಿಗೆ ಆಲೌಟ್​ ಆಗುವ ಮೂಲಕ 4-0ಯಲ್ಲಿ ಸರಣಿ ಕಳೆದುಕೊಂಡಿತು.

ಇಂಗ್ಲೆಂಡ್​ ತಂಡದ ಪರ ಮಾರಕ ಬೌಲಿಂಗ್​ ದಾಳಿ ನಡೆಸಿದ ಬೆನ್​ ವೋಕ್ಸ್​ 5 ವಿಕೆಟ್​ ಪಡೆದರೆ, ರಶೀದ್​ 2, ಡೇವಿಡ್​ ವಿಲ್ಲೆ ಒಂದು ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಏಕದಿನ ಶ್ರೇಯಾಂಕದಲ್ಲಿ ನಂ.1 ತಂಡವಾಗಿರುವ ಇಂಗ್ಲೆಂಡ್​ ಈ ಸರಣಿ ಗೆಲುವಿನೊಂದಿಗೆ ತನ್ನ ವಿಶ್ವಕಪ್​ ಗೆಲ್ಲುವ ರೇಸ್​ನಲ್ಲಿ ತಾನೇ ಮೊದಲು ಎನ್ನುವುದನ್ನು ಕ್ರಿಕೆಟ್​ ಜಗತ್ತಿಗೆ ತೋರಿಸಿಕೊಟ್ಟಿದೆ.

Last Updated : May 20, 2019, 9:28 AM IST

ABOUT THE AUTHOR

...view details