ಕರ್ನಾಟಕ

karnataka

ETV Bharat / briefs

ಕೋವಿಡ್ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ ಕಿಮ್ಸ್ ವೈದ್ಯ ತಂಡ - Dharwad corona virus cases

ವಿಭಾಗದ ಮುಖ್ಯಸ್ಥೆ ಡಾ. ಕಸ್ತೂರಿ ಡೋಣಿಮಠ, ಶಸ್ತ್ರಚಿಕಿತ್ಸಕ ಡಾ. ವೈ ಎಂ ಕಬಾಡಿ, ಅರವಳಿಕೆ ತಜ್ಞೆ ಡಾ.ವೀಣಾ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಾದ ಡಾ.ಅಕ್ಷತಾ ನಿಂಗನೂರೆ, ಡಾ. ಸಹನಾ, ಡಾ.ರೂಪಾ, ನರ್ಸಿಂಗ್ ವಿಭಾಗದ ಶ್ವೇತಾ, ರೇಷ್ಮಾ, ಸಹಾಯಕ ಸಿಬ್ಬಂದಿ ಕಳಕಪ್ಪ ಮತ್ತಿತರರ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದರು..

Surgery for a pregnant woman infected with corona
Surgery for a pregnant woman infected with corona

By

Published : Jun 28, 2020, 9:01 PM IST

ಹುಬ್ಬಳ್ಳಿ :ತಾಲೂಕಿನ ಉಮಚಗಿ ಗ್ರಾಮದ ತುಂಬು ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವಲ್ಲಿ ಕಿಮ್ಸ್ ವೈದ್ಯರ ತಂಡ ಯಶಸ್ವಿಯಾಗಿದೆ.

ತುಂಬು ಗರ್ಭಿಣಿಗೆ (ಪಿ-10800, 25 ವರ್ಷ) 39 ವಾರಗಳು ಹಾಗೂ 4 ದಿನಗಳು ಪೂರ್ಣಗೊಂಡಿದ್ದರೂ ಸಹಜ ಹೆರಿಗೆ ಸಾಧ್ಯವಿಲ್ಲದ ಲಕ್ಷಣಗಳಿದ್ದುದರಿಂದ ಇಂದು ಬೆಳಗ್ಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದಾರೆ. 3.5 ಕೆಜಿ ತೂಕದ ಹೆಣ್ಣು ಮಗುವಿಗೆ ಸೋಂಕಿತ ಮಹಿಳೆ ಜನ್ಮ ನೀಡಿದ್ದಾಳೆ.

ವಿಭಾಗದ ಮುಖ್ಯಸ್ಥೆ ಡಾ. ಕಸ್ತೂರಿ ಡೋಣಿಮಠ, ಶಸ್ತ್ರಚಿಕಿತ್ಸಕ ಡಾ. ವೈ ಎಂ ಕಬಾಡಿ, ಅರವಳಿಕೆ ತಜ್ಞೆ ಡಾ.ವೀಣಾ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಾದ ಡಾ.ಅಕ್ಷತಾ ನಿಂಗನೂರೆ, ಡಾ. ಸಹನಾ, ಡಾ.ರೂಪಾ, ನರ್ಸಿಂಗ್ ವಿಭಾಗದ ಶ್ವೇತಾ, ರೇಷ್ಮಾ, ಸಹಾಯಕ ಸಿಬ್ಬಂದಿ ಕಳಕಪ್ಪ ಮತ್ತಿತರರ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದರು.

ಕಿಮ್ಸ್ ತಜ್ಞರ ಕಾರ್ಯಕ್ಕೆ ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details