ಬಳ್ಳಾರಿ: ಮೇಡಂ, ಸರ್, ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷ ಅಭ್ಯರ್ಥಿಯಾದ ನಾನು ಎ.ದೇವದಾಸ್ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಅಭ್ಯರ್ಥಿಯಾಗಿ ನಿಂತಿದ್ದೇನೆ, ದಯಮಾಡಿ ಓಟು ನೀಡಿ ಜೊತೆಗೆ ನೋಟು ಸಹ ನೀಡಿ ಎಂದು ಮತದಾರರಲ್ಲಿ ಬೇಡಿಕೊಂಡರು.
ಬಳ್ಳಾರಿ ನಗರದ ಗಡಿಗಿ ಚನ್ನಪ್ಪ ವೃತ್ತದಿಂದ ಪ್ರಾರಂಭವಾದ ಈ ಎಸ್.ಯು.ಸಿ.ಐ ಕಮ್ಯುನಿಸ್ಟ್ ಅಭ್ಯರ್ಥಿ ಎ.ದೇವದಾಸ್ ಅವರ ಓಟು ನೀಡಿ ಜೊತೆಗೆ ನೋಟು ಸಹ ನೀಡಿ ಎನ್ನುವ ವಾಕ್ಯದೊಂದಿಗೆ ಬಳ್ಳಾರಿ ನಗರದ ಪ್ರಮುಖ ರಸ್ತೆಗಳಲ್ಲಿ ಜನರಿಗೆ ನಮ್ಮ ಪಕ್ಷಕ್ಕೆ ಓಟು ನೀಡಿ ಜೊತೆಗೆ ನಿಮ್ಮಿಂದ ಅಲ್ಪ ಧನಸಹಾಯ ಮಾಡಿ ಎಂದು ದಾರಿ ಉದ್ದಕ್ಕೂ ಕರಪತ್ರಗಳನ್ನು ಹಂಚುತ್ತಾ ಪ್ರಚಾರ ಮಾಡಿದ್ದಾರೆ.
ಕಮ್ಯುನಿಸ್ಟ್ ಪಕ್ಷ ಅಭ್ಯರ್ಥಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷ ಬಡವರ, ವಿದ್ಯಾರ್ಥಿಗಳ, ರೈತರ, ಹೋರಾಟಗಾರ ಪಕ್ಷ. ನಿಮ್ಮ ಕೈಯಿಂದ ಅದಷ್ಟು ಹಣ ಸಹಾಯ ಮಾಡಿ ಎಂದು ಕೇಳುತ್ತಾ, ಮತ ಕೇಳುತ್ತಾ ಜನರ ಬಳಿ ಹೋಗಿದ್ದು ವಿಶೇಷ ವಾಗಿತ್ತು.
ಕಳೆದ ಮೂರು ವರ್ಷದಿಂದ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷವು ನಿರಂತರವಾಗಿ ಹೋರಾಟಗಳನ್ನು ಮಾಡ್ತಾ ಬಂದಿದ್ದೇವೆ. ರೈತರು, ಕಾರ್ಮಿಕರದ್ದು, ಮಧ್ಯಾಹ್ನ ವರ್ಗ ಮತ್ತು ವಿದ್ಯಾರ್ಥಿಗಳ ಏಳಿಗೆಗಾಗಿ ಹೋರಾಟ ಮಾಡ್ತಾ ಬಂದಿದ್ದೇವೆ. ಹಾಗೇ ಬಳ್ಳಾರಿಯಲ್ಲಿ ಕುಡಿಯುವ ನೀರಿಗಾಗಿ, ರಸ್ತೆಗಳಿಗಾಗಿ ಹೋರಾಟ ಮಾಡಿದ್ದೆವೆ ಎಂದರು. ಹೋರಾಟದ ಜೊತೆಗೆ ರಾಜಕೀಯಕ್ಕೂ ಹೋರಾಟ ಎಂದು ತೆಗೆದುಕೊಂಡಿದ್ದೇವೆ ಎಂದು ಎ.ದೇವದಾಸ್ ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಒಟ್ಟಾರೆಯಾಗಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಅಭ್ಯರ್ಥಿ ಎ.ದೇವದಾಸ್ ನೇತೃತ್ವದಲ್ಲಿ ವಿಭಿನ್ನವಾಗಿ ಮತ ಕೇಳುವ ಹಾಗೇ ಜೊತೆಗೆ ಹಣ ಸಹಾಯ ಮಾಡುವ ಪದ್ಧತಿ ವಿಶೇಷ ವಾಗಿತ್ತು. ಈ ಸಮಯದಲ್ಲಿ ಸೋಮಶೇಖರ್, ಸುರೇಶ್, ಗೋವಿಂದ, ಹತ್ತಾರು ಎಸ್.ಯು.ಸಿ.ಐ ಮುಖಂಡರು, ಸದಸ್ಯರು ಭಾಗವಹಿಸಿದ್ದರು.