ಕರ್ನಾಟಕ

karnataka

ETV Bharat / briefs

ಮೋಜು ತಂದ ಆಪತ್ತು: ಕೆರೆಯಲ್ಲಿ ಮುಳುಗಿ ಬಾಲಕ ಸಾವು - swim

ಈಜಲು ಹೋದ 10 ವರ್ಷದ ಬಾಲಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ದುರಂತ ವರದಿಯಾಗಿದೆ.

ಮೃತ ಬಾಲಕ

By

Published : Jun 4, 2019, 6:46 PM IST

ಮೈಸೂರು:ತಮ್ಮನೊಂದಿಗೆ ಈಜಲು ಹೋಗಿದ್ದ ಬಾಲಕನೊಬ್ಬ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಎಚ್.ಡಿ.ಕೋಟೆ ತಾಲೂಕಿನ‌ ಪಡುಕೋಟೆ ಗ್ರಾಮದಲ್ಲಿ ಜರುಗಿದೆ.

ಆದಿತ್ಯ ತನ್ನ ತಮ್ಮನೊಂದಿಗೆ ಸಮೀಪವಿದ್ದ ಕೆರೆಗೆ ಈಜಲು ಹೋಗಿದ್ದಾನೆ. ತನ್ನ ಅಣ್ಣ ನೀರಿನಲ್ಲಿ ಮುಳುಗಡೆಯಾಗಿದ್ದನ್ನು ಕಂಡು, ಅಣ್ಣನನ್ನು ಕಾಪಾಡುವಂತೆ ತಮ್ಮ ಜೋರಾಗಿ ಕಿರುಚಿದ್ದಾನೆ. ಆದರೆ, ನೆರೆಯವರು ಬರುವಷ್ಟರಲ್ಲಿ ಆದಿತ್ಯನ ಪ್ರಾಣಪಕ್ಷಿ ಹಾರಿಹೋಗಿತ್ತು.

ಘಟನೆ ನಡೆಯುವಾಗ ಬಾಲಕನ ಪೋಷಕರು ಪಡುಕೋಟೆ ಗ್ರಾಮದ ತೋಟವೊಂದರಲ್ಲಿ‌ ಕೆಲಸ‌ ಮಾಡಲು ಹೋಗಿದ್ದರು ಎನ್ನಲಾಗಿದೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ABOUT THE AUTHOR

...view details