ಕರ್ನಾಟಕ

karnataka

ETV Bharat / briefs

ಸಿಬಿಎಸ್​ಸಿ 12ನೇ ತರಗತಿಯಲ್ಲಿ ರಾಜ್ಯಕ್ಕೆ ಟಾಪರ್​ ಆದ ಹುಡುಗ, ಸಿಇಟಿಯಲ್ಲೂ ಮಾಡಿದ ಕಮಾಲ್​ - national

ಸಿಬಿಎಸ್​ಇ 12ನೇ ತರಗತಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ಜೆಫೆನ್​ ಬಿಜು, ಇದೀಗ ಕರ್ನಾಟಕ ಸಿಇಟಿಯಲ್ಲೂ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರಿಗೆ ಮದ್ರಾಸಿನ ಐಐಟಿಯಲ್ಲಿ ಎಂಜಿನಿಯರಿಂಗ್ ಮಾಡುವ ಆಸೆಯಿದೆ.

ಜೆಫೆನ್​ ಬಿಜು

By

Published : May 25, 2019, 12:12 PM IST

ಬೆಂಗಳೂರು: ಸಿಬಿಎಸ್​ಸಿ 12ನೇ ತರಗತಿಯ ಪರೀಕ್ಷೆಯಲ್ಲಿ ಶೇಕಡಾ 98.6 ಫಲಿತಾಂಶ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ಜೆಫಿನ್ ಬಿಜು ಇಂದು ಪ್ರಕಟವಾದ ಕರ್ನಾಟಕ ಸಾಮಾನ್ಯ ಪರೀಕ್ಷೆಯಲ್ಲೂ ಎಂಜಿನಿಯರಿಂಗ್​ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ನಗರದ ಬಿಜು ಜೋಸೆಫ್ ಹಾಗೂ ಡಿಂಪಲ್ ಬಿಜು ಅವರ ಮಗ ಜೆಫಿನ್ ಬಿಜು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ 12ನೇ ತರಗತಿಯ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದರು.

ಬೆಂಗಳೂರಿನ ಮಾರತಹಳ್ಳಿಯಲ್ಲಿರುವ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್​ನಲ್ಲಿ ವಿದ್ಯಾಭ್ಯಾಸ ನಡೆಸಿದ ಜೆಫಿನ್ ಶಾಲಾ ಶಿಕ್ಷಕರು ಹಾಗೂ ಪೋಷಕರ ಬೆಂಬಲದಿಂದ ಓದಿ, ಸಿಬಿಎಸ್​ಸಿ 12ನೇ ತರಗತಿಯ ಪರೀಕ್ಷೆಯಲ್ಲಿ ಶೇಕಡಾ 98.6 ಫಲಿತಾಂಶ ಪಡೆದು ತೇರ್ಗಡೆಯಾಗಿದ್ದಾರೆ.

ಜೆಫಿನ್ ಅವರ ಸಹೋದರ ಕೂಡಾ ಮದ್ರಾಸಿನ ಐಐಟಿಯಲ್ಲಿ ಓದುತಿದ್ದು, ಅಣ್ಣ ಕಾಲೇಜ್ ಟಾಪರ್ ಆಗಿದ್ದರು. ಹೀಗಾಗಿ ತನ್ನ ಸಾಧನೆಗೆ ಅಣ್ಣನೇ ಸ್ಪೂರ್ತಿ ಎನ್ನುತ್ತಾರೆ ಜೆಫಿನ್. ಅಲ್ಲದೆ ತಾಯಿ ಡಿಂಪಲ್ ಬಿಜು ಅವರೂ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾಗಿದ್ದು, ಸ್ವಯಂ ನಿವೃತ್ತಿ ಪಡೆದು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸುತ್ತಿದ್ದಾರೆ.

ಜೆಇಇ ಮೈನ್ ಎಕ್ಸಾಂನಲ್ಲೂ 335ನೇ ಆಲ್ ಇಂಡಿಯಾ ರ‍್ಯಾಂಕ್ ಪಡೆದಿರುವ ಜೆಫಿನ್ ಇದೇ ತಿಂಗಳಲ್ಲಿ ನಡೆಯಲಿರುವ ಜೆಇಇ ಅಡ್ವಾನ್ಸ್, ಹಾಗೂ ಮದ್ರಾಸಿನ ಐಐಟಿ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಪ್ರತಿನಿತ್ಯ ಎಂಟರಿಂದ ಹತ್ತು ಗಂಟೆಗಳ ಕಾಲ ಓದಿ, ಶ್ರಮ ಪಟ್ಟಿದ್ದರಿಂದ ಸಿಬಿಎಸ್​ಸಿ ಎಕ್ಸಾಂನಲ್ಲಿ ರಾಜ್ಯಕ್ಕೇ ಪ್ರಥಮ ರ‍್ಯಾಂಕ್ ಬರಲು ಸಾಧ್ಯವಾಯಿತು ಎನ್ನುತ್ತಾರೆ ಕೆಸಿಇಟಿ ಟಾಪರ್​ ಬಿಜು.

ಮುಂದೆ ಮದ್ರಾಸಿನ ಐಐಟಿಯಲ್ಲಿ ಶಿಕ್ಷಣ ಪಡೆಯುವ ಗುರಿಯನ್ನು ಹೊಂದಿರುವ ಜೆಫಿಮ್ ಬಿಜು. ಮುಂದೆ ಗುರಿ , ಹಿಂದೆ ಗುರುವಿನ ಬೆಂಬಲ ಇದ್ರೆ ಎಂತಹ ಸಾಧನೆಯನ್ನೂ ಮಾಡಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ.

For All Latest Updates

TAGGED:

national

ABOUT THE AUTHOR

...view details