ಕೊಲಂಬೊ: ಶ್ರೀಲಂಕಾದಲ್ಲಿ ಸಂಭವಿಸಿರುವ ಸರಣಿ ಬಾಂಬ್ ಸ್ಫೋಟದಲ್ಲಿ ಐವರು ಭಾರತೀಯರೂ ಸೇರಿದಂತೆ ಸಾವಿನ ಸಂಖ್ಯೆ 290ಕ್ಕೇರಿದೆ. ಇನ್ನು 450 ಜನರು ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಐವರು ಭಾರತೀಯರು ಸೇರಿ ಸಾವಿನ ಸಂಖ್ಯೆ 290ಕ್ಕೇರಿಕೆ... 13 ಮಂದಿ ಶಂಕಿತರನ್ನು ಬಂಧಿಸಿದ ಲಂಕಾ ಪೊಲೀಸ್! - ಬಾಂಬ್ ಸ್ಪೋಟ
ಈಸ್ಟರ್ ದಿನವಾದ ಭಾನುವಾರದಂದು ಶ್ರೀಲಂಕಾದ ಮೂರು ಚರ್ಚ್ ಹಾಗೂ ಮೂರು ಐಷಾರಾಮಿ ಹೋಟೆಲ್ ಸೇರಿದಂತೆ ಏಕಕಾಲದಲ್ಲಿ ಭಯೋತ್ಪಾದಕರು 8 ಕಡೆ ಸರಣಿ ಬಾಂಬ್ ಸ್ಫೋಟಿಸಿದ್ದರು. ಇದರಲ್ಲಿ ಐವರು ಭಾರತೀಯರು ಸೇರಿದಂತೆ ಈವರೆಗೆ 290 ಜನ ಸಾವನ್ನಪ್ಪಿದ್ದಾರೆ.
ಭಾನುವಾರ ಈಸ್ಟರ್ ದಿನದ ಸಂಭ್ರಮದಲ್ಲಿದ್ದಾಗ ಶ್ರೀಲಂಕಾದ ಮೂರು ಚರ್ಚ್ ಹಾಗೂ ಮೂರು ಐಷಾರಾಮಿ ಹೋಟೆಲ್ ಸೇರಿದಂತೆ ಏಕಕಾಲದಲ್ಲಿ ಭಯೋತ್ಪಾದಕರು 8 ಕಡೆ ಸರಣಿ ಬಾಂಬ್ ಸ್ಫೋಟಿಸಿದ್ದರು. ಈಗಾಗಲೇ ಭಯೋತ್ಪಾದಕರ ಕೃತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಅಂತೆಯೇ ಶ್ರೀಲಂಕಾಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿರುವ ಲಂಕಾ ಪೊಲೀಸರು ಈಗಾಗಲೇ 13 ಮಂದಿ ಶಂಕಿತರನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಅಮೆರಿಕ, ಬ್ರಿಟನ್ ಸೇರಿದಂತೆ 35 ವಿದೇಶಿಯರು ಸಹ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಈ ಭೀಕರ ದಾಳಿಯ ಹೊಣೆಯನ್ನ ಇಲ್ಲಿಯವರೆಗೆ ಯಾವುದೇ ಉಗ್ರ ಸಂಘಟನೆ ಹೊತ್ತಿಕೊಂಡಿಲ್ಲ. ಇತ್ತ ಭಾರತೀಯರಿಗಾಗಿ ವಿದೇಶಾಂಗ ಇಲಾಖೆ ಹೆಲ್ಪ್ಲೈನ್ ಕೂಡ ತೆರೆದಿದೆ.