ಕರ್ನಾಟಕ

karnataka

ETV Bharat / briefs

ರೋಚಕ ಹಣಾಹಣಿಗೆ ಸಾಕ್ಷಿಯಾಗಲಿದೆ ವಾಂಖೆಡೆ... ಪ್ಲೆ ಆಫ್​ಗಾಗಿ ಕಾದಾಡಲಿವೆ ಮುಂಬೈ-ಹೈದರಾಬಾದ್​ - ಸನ್​ರೈಸರ್ಸ್​ ಹೈದರಾಬಾದ್​

2 ನೇ ಆವೃತ್ತಿಯಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡಿ ಆರೆಂಜ್​ ಕ್ಯಾಪ್​ ಪಡೆದುಕೊಂಡಿದ್ದ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಡೇವಿಡ್​ ವಾರ್ನರ್​ ಸ್ವದೇಶಕ್ಕೆ ಮರಳಿದ್ದಾರೆ. ಹೈದರಾಬಾದ್​ ಗೆದ್ದಿರುವ ಹಲವು ಪಂದ್ಯಗಳಲ್ಲಿ ವಾರ್ನರ್​ರ ಶ್ರಮ ಹೆಚ್ಚಿತ್ತು, ಇದೀಗ ಮುಂಬೈನಂತಹ ಬಲಿಷ್ಠ ತಂಡವನ್ನು ಎದುರಿಸುವುದು ನಿಜಕ್ಕೂ ದೊಡ್ಡ ಸವಾಲಾಗಲಿದೆ.

mi

By

Published : May 2, 2019, 5:04 PM IST

Updated : May 2, 2019, 5:11 PM IST

ಮುಂಬೈ: ವಾರ್ನರ್​ ಇಲ್ಲದ ಸನ್​ರೈಸರ್ಸ್​ ವಿರುದ್ಧ ಗೆದ್ದು ನೇರ ಪ್ಲೇ ಆಫ್​ ಪ್ರವೇಶಿಸುವ ನಿರೀಕ್ಷೆಯಲ್ಲಿ ಬಲಿಷ್ಠ ಮುಂಬೈ ಇದ್ದರೆ, ಈ ಪಂದ್ಯ ಗೆಲ್ಲುವ ಮೂಲಕ ರನ್​ರೇಟ್​ ಆಧಾರದ ಮೇಲೆ ಪ್ಲೇ ಆಫ್​ ಪ್ರವೇಶಿಸುವ ಲೆಕ್ಕಾಚಾರದಲ್ಲಿ ಸನ್​ರೈಸರ್ಸ್​ ಇದೆ.

12 ನೇ ಆವೃತ್ತಿಯಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡಿ ಆರೆಂಜ್​ ಕ್ಯಾಪ್​ ಪಡೆದುಕೊಂಡಿದ್ದ ಸನ್​ರೈಸರ್ಸ್​ ಹೈದರಾಬಾದ್​ ತಂಡ್ ಡೇವಿಡ್​ ವಾರ್ನರ್​ ಸ್ವದೇಶಕ್ಕೆ ಮರಳಿದ್ದಾರೆ. ಹೈದರಾಬಾದ್​ ಗೆದ್ದಿರುವ ಹಲವು ಪಂದ್ಯಗಳಲ್ಲಿ ವಾರ್ನರ್​ ಶ್ರಮ ಹೆಚ್ಚಿತ್ತು, ಇದೀಗ ಮುಂಬೈನಂತಹ ಬಲಿಷ್ಠ ತಂಡವನ್ನು ಎದುರಿಸುವುದು ನಿಜಕ್ಕೂ ದೊಡ್ಡ ಸವಾಲಾಗಲಿದೆ.

ಆದರೆ, ಈ ಪಂದ್ಯ ಗೆದ್ದಿದ್ದೇ ಆದರೆ, ರನ್​ರೇಟ್​ ಆಧಾರದ ಮೇಲೆ ಮೂರು ಅಥವಾ ನಾಲ್ಕನೇ ಸ್ಥಾನ ಖಚಿತವಾಗಲಿದೆ. ಆದ್ದರಿಂದ ಈ ಪಂದ್ಯ ಎರಡು ತಂಡಗಳಿಗೂ ಮಹತ್ವ ಪಡೆದುಕೊಂಡಿದೆ. ವಾರ್ನರ್​ ಬದಲಿಗೆ ಕಿವೀಸ್ ​ಮಾರ್ಟಿನ್​ ಗಪ್ಟಿಲ್​ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಮನೀಷ್ ಪಾಂಡೆ ಕಳೆದ 3 ಪಂದ್ಯಗಳಲ್ಲಿ ಅಬ್ಬರದ ಬ್ಯಾಟಿಂಗ್​ ನಡೆಸುತ್ತಿದ್ದಾರೆ. ಈ ಪಂದ್ಯದಲ್ಲೂ ಅವರ ಬ್ಯಾಟಿಂಗ್​ ಮುಂದುವರಿದರೆ ಗೆಲುವು ಅಸಾಧ್ಯವೇನಲ್ಲ. ಬೌಲಿಂಗ್​ನಲ್ಲಿ ಭುವಿ, ರಶೀದ್​ ಹಾಗೂ ನಬಿ ಬಲವಿದೆ.

ಮುಂಬೈ ತಂಡ ಎಲ್ಲ ವಿಭಾಗದಲ್ಲೂ ಉತ್ತಮವಾಗಿದೆ. ಆದರೆ, ಆರಂಭಿಕರಾದ ಡಿಕಾಕ್​ ಹಾಗೂ ರೋಹಿತ್​ ಅಸ್ಥಿರ ಪ್ರದರ್ಶನ ತೋರುತ್ತಿರುವುದೇ ತಂಡಕ್ಕೆ ತಲೆನೋವಾಗಿದೆ. ಇನ್ನು ಪಾಂಡ್ಯ ಬ್ರದರ್ಸ್​ ಬ್ಯಾಟಿಂಗ್​ - ಬೌಲಿಂಗ್​ ಎರಡರಲ್ಲೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಪೊಲಾರ್ಡ್​, ಸೂರ್ಯ ಕುಮಾರ್​ ಯಾದವ್​ ಕೂಡ ಅಪಾಯಕಾರಿ ಬ್ಯಾಟ್ಸ್​ಮನ್​ ಎಂಬುದನ್ನು ಮರೆಯುವಂತಿಲ್ಲ.

ಬೌಲಿಂಗ್​ನಲ್ಲಿ ಮಲಿಂಗಾ, ಬುಮ್ರಾ ಹಾಗೂ ರಾಹುಲ್​ ಚಹಾರ್​ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಪಂದ್ಯ ಬಿಟ್ಟರೆ, ಉಳಿದೆಲ್ಲ ಪಂದ್ಯಗಳಲ್ಲೂ ಈ ಮೂವರ ಬೌಲಿಂಗ್​ ಉತ್ತಮವಾಗಿದೆ. ಇಂದು ತವರಿನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಈ ಪಂದ್ಯವನ್ನು ಗೆದ್ದು ನೇರ ಪ್ಲೇ ಆಫ್​ಗೆ ಏರಲಿರುವುದರಿಂದ, ಈ ಅವಕಾಶವನ್ನು ಮುಂಬೈ ಯಾವ ರೀತಿ ಉಪಯೋಗಿಸಿಕೊಳ್ಳಲಿದೆ ಎಂಬುದನ್ನ ಕಾದು ನೋಡಬೇಕಿದೆ.

ಮುಖಾಮುಖಿ:

ಎರಡು ತಂಡಗಳು 13 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಮುಂಬೈ 6 ರಲ್ಲಿ ಹೈದರಾಬಾದ್​, 7 ರಲ್ಲಿ ಜಯಸಾಧಿಸಿದೆ. ಮುಂಬೈನಲ್ಲಿ ನಡೆದಿರುವ ಪಂದ್ಯಗಳಲ್ಲಿ 3ರಲ್ಲಿ, ಮುಂಬೈ 1ರಲ್ಲಿ ಹೈದರಾಬಾದ್​ ಗೆಲುವು ಸಾಧಿಸಿದೆ. ಕಳೆದ ಪಂದ್ಯದಲ್ಲಿ ಮುಂಬೈ ಅಲ್ಝಾರಿ ಜೋಷೆಪ್​ರ ಮಾರಕ ಬೌಲಿಂಗ್​ ದಾಳಿಗೆ ನಲುಗಿ 134 ರನ್​ಗಳನ್ನು ಬೆನ್ನೆತ್ತಲಾಗದೆ 40 ರನ್​ಗಳಿಂದ ಸೋಲನುಭವಿಸಿತ್ತು.

ಆದರೆ ಕಳೆದ ಆವೃತ್ತಿಯಲ್ಲಿ ಎರಡೂ ಪಂದ್ಯಗಳನ್ನು ಹೈದರಾಬಾದ್​ ತಂಡವೇ ಜಯ ಸಾಧಿಸಿತ್ತು.

ಸಂಭಾವ್ಯ ತಂಡ...

ಮುಂಬೈ ಇಂಡಿಯನ್ಸ್:

ರೋಹಿತ್‌ ಶರ್ಮಾ (ನಾಯಕ), ಕ್ವಿಂಟನ್‌ ಡಿ ಕಾಕ್‌, ಸೂರ್ಯಕುಮಾರ್‌ ಯಾದವ್​, ಕೀರನ್​ ಪೊಲ್ಲಾರ್ಡ್‌, ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ, ಮಲಿಂಗಾ, ರಾಹುಲ್​ ಚಹಾರ್​​, ಬೂಮ್ರಾ, ಇವಿನ್​ ಲೆವಿಸ್, ಮಯಾಂಕ್​ ಮಾರ್ಕಂಡೆ​​​

ಸನ್​ರೈಸರ್ಸ್​ ಹೈದರಾಬಾದ್
ಮಾರ್ಟಿನ್​ ಗಪ್ಟಿಲ್​, ಕೇನ್​ ವಿಲಿಯಮ್ಸನ್ , ವಿಜಯ್​ ಶಂಕರ್​, ಮನೀಷ್​ ಪಾಂಡೆ, ಯೂಸಫ್​ ಪಠಾಣ್​, ಶಕಿಭ್​ ಹಲ್​ ಹಸನ್​/ಮಹಮ್ಮದ್​ ನಬಿ, ಭುವನೇಶ್ವರ್​ ಕುಮಾರ್​, ರಶೀದ್​ ಖಾನ್​, ಸಿದ್ದಾರ್ಥ್​​ ಕೌಲ್/ಅಭಿಷೇಕ್​ ಶರ್ಮಾ, ಸಂದೀಪ್​ ಶರ್ಮಾ,ವೃದ್ಧಿಮಾನ್​ ಸಹಾ

Last Updated : May 2, 2019, 5:11 PM IST

ABOUT THE AUTHOR

...view details