ಕರ್ನಾಟಕ

karnataka

By

Published : May 30, 2019, 5:34 PM IST

ETV Bharat / briefs

ತಮ್ಮ ಕೊನೆಯ ವಿಶ್ವಕಪ್​ನಲ್ಲಿ ವಿಶ್ವದಾಖಲೆ ಬರೆದ ಇಮ್ರಾನ್​ ತಾಹೀರ್​!

40 ವರ್ಷದ ದಕ್ಷಿಣ ಆಫ್ರಿಕಾದ ಇಮ್ರಾನ್​ ತಾಹೀರ್ 11 ವಿಶ್ವಕಪ್​ಗಳ ಇತಿಹಾಸದಲ್ಲೇ ಮೊದಲ ಓವರ್​ ಎಸೆದ ಸ್ಪಿನ್ನರ್​ ಎಂಬ ದಾಖಲೆಗೆ ಪಾತ್ರರಾದರು.

ತಾಹೀರ್​

ಲಂಡನ್​: ದಕ್ಷಿಣ ಆಫ್ರಿಕಾದ ಪರಾಶಕ್ತಿ ಎಕ್ಸ್​ಪ್ರೆಸ್​ ಖ್ಯಾತಿಯ ಇಮ್ರಾನ್​ ತಾಹೀರ್​ ವಿಶ್ವಕಪ್​ ಇತಿಹಾಸದಲ್ಲಿ ಮೊದಲ ಓವರ್​ ಎಸೆದ ಸ್ಪಿನ್​ ಬೌಲರ್​ ಎಂಬ ವಿಶೇಷತೆ ದಾಖಲೆಗೆ ಪಾತ್ರರಾದರು.

ಟಾಸ್​ ಗೆದ್ದ ಇಂಗ್ಲೆಂಡ್​ ಬ್ಯಾಟಿಂಗ್​ ಆಯ್ದುಕೊಂಡ ಹಿನ್ನೆಲೆಯಲ್ಲಿ ದ. ಆಫ್ರಿಕಾ ತಂಡದ ನಾಯಕ ಫಾಫ್​ ಡು ಪ್ಲೆಸಿಸ್​ 40 ವರ್ಷದ ತಾಹೀರ್ ಕೈಗೆ ಬಾಲ್​ ನೀಡುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾದರು. ಏಕೆಂದರೆ 11 ವಿಶ್ವಕಪ್​ಗಳ ಇತಿಹಾಸದಲ್ಲೇ ಮೊದಲ ಓವರ್​ ಎಸೆದ ಸ್ಪಿನ್ನರ್​ ಎಂಬ ದಾಖಲೆಗೆ ತಾಹೀರ್​ ಪಾತ್ರರಾದರು. 1992 ರಲ್ಲಿ ನ್ಯೂಜಿಲ್ಯಾಂಡ್​ನ ಸ್ಪಿನ್ನರ್​ ದೀಪಕ್​ ಪಟೇಲ್​ ಎರಡನೇ ಇನ್ನಿಂಗ್ಸ್​ನಲ್ಲಿ ಮೊದಲ ಓವರ್​ ಎಸೆದಿದ್ದರು.

ಇದಲ್ಲದೆ ತಾಹೀರ್​ ತಮ್ಮ ಮೊದಲ ಓವರ್​ನಲ್ಲೇ ಇಂಗ್ಲೆಂಡ್​ನ ಜಾನಿ ಬೈರ್ಸ್ಟೋವ್​ರನ್ನು ಔಟ್​ ಮಾಡುವ ಮೂಲಕ ವಿಶ್ವಕಪ್​ನಲ್ಲಿ ಮೊದಲ ಓವರ್​ನಲ್ಲೇ ವಿಕೆಟ್​ ಪಡೆದ 2ನೇ ಬೌಲರ್​ ಎಂಬ ದಾಖಲೆ ಸೃಷ್ಟಿಸಿದರು.

1992 ರಲ್ಲಿ ವಿಶ್ವಕಪ್​ನಲ್ಲಿ ಇಂಗ್ಲೆಂಡ್​ನ ಜಾನ್​ ರೈಟ್​ ಕೂಡ ಮೊದಲ ಓವರ್​ನಲ್ಲೇ ವಿಕೆಟ್​ ಒಪ್ಪಿಸಿದರು. ಇದೀಗ ಮತ್ತೊಬ್ಬ ಇಂಗ್ಲೆಂಡ್​ ಬ್ಯಾಟ್ಸ್​ಮನ್​ ಬ್ಯಾರ್ಸ್ಟೋವ್​ ಕೂಡ ತಮ್ಮ ಮೊದಲ ಓವರ್​ನಲ್ಲೇ ವಿಕೆಟ್​ ಒಪ್ಪಿಸಿದರು.

ABOUT THE AUTHOR

...view details