ಕರ್ನಾಟಕ

karnataka

ETV Bharat / briefs

ಪತ್ನಿ ಸೇರಿ ಮೂವರ ಮಕ್ಕಳ ಕೊಲೆ : ಹತ್ಯೆ ಬಳಿಕ ಸೈನೇಡ್‌ ಖರೀದಿಸಿದ ವಿಡಿಯೋ ವಾಟ್ಸ್​​​ಆ್ಯಪ್​​ನಲ್ಲಿ ಹಾಕಿದ ಟೆಕ್ಕಿ! - ಪತ್ನಿ

ಉತ್ತರಪ್ರದೇಶದ ಘಾಜಿಯಾಬಾದ್​ನ ಇಂದಿರಾಪುರಂನಲ್ಲಿ ಈ ಘಟನೆ ನಡೆದಿದೆ. ಪೊಲೀಸರು ತಿಳಿಸಿದಂತೆ ಸುಮಿತ್​ ಕುಮಾರ್​ ಪತ್ನಿ ಅನ್ಸುಬಾಲ್​(32), ಐದು ವರ್ಷದ ಮಗು ಪ್ರಥಮೇಶ್​ ಹಾಗೂ 4 ವರ್ಷದ ಅರಾವ್​ ಮತ್ತು ಆಕೃತಿ ಸಾವನ್ನಪ್ಪಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Apr 22, 2019, 11:36 AM IST

ಘಾಜಿಯಾಬಾದ್​​: 34 ವರ್ಷದ ಸಾಫ್ಟ್​ವೇರ್​ ಎಂಜಿನಿಯರ್​​ನೋರ್ವ ಪತ್ನಿ ಸೇರಿದಂತೆ ಮೂವರು ಮಕ್ಕಳ ಕೊಲೆ ಮಾಡಿದ್ದಾನೆ. ಆ ಬಳಿಕ ಕೊಲೆ ಮಾಡಿದ ದೃಶ್ಯವನ್ನ ಕುಟುಂಬದ ವಾಟ್ಸ್​ಆ್ಯಪ್​ ಗ್ರೂಪ್​​ನಲ್ಲಿ ಹಾಕಿದ್ದಾರೆ. ಜತೆಗೆ ತಾನು ಕೊಲೆ ಮಾಡಿರೋದನ್ನ ಒಪ್ಪಿಕೊಂಡಿದ್ದಾನೆ.

ಉತ್ತರಪ್ರದೇಶದ ಘಾಜಿಯಾಬಾದ್​ನ ಇಂದಿರಾಪುರಂನಲ್ಲಿ ಈ ಘಟನೆ ನಡೆದಿದೆ. ಪೊಲೀಸರು ತಿಳಿಸಿರುವಂತೆ ಸುಮಿತ್​ ಕುಮಾರ್​ ಪತ್ನಿ ಅನ್ಸುಬಾಲ್​(32),ಐದು ವರ್ಷದ ಮಗು ಪ್ರಥಮೇಶ್​, ಹಾಗೂ ನಾಲ್ಕು ವರ್ಷದ ಅರಾವ್​ ಮತ್ತು ಆಕೃತಿ ಸಾವನ್ನಪ್ಪಿದ್ದಾರೆ. ಘಟನೆ ನಂತರ ಸ್ಥಳದಿಂದ ಪಲಾಯನಗೈಯುವುದಕ್ಕೂ ಮುನ್ನ ತಾನು ಸೈನೇಡ್​ ಖರೀದಿ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ವಿಡಿಯೋ ಮಾಡಿ ಕುಟಂಬದ ವಾಟ್ಸ್​ಆ್ಯಪ್​ನಲ್ಲಿ ಶೇರ್​ ಮಾಡಿದ್ದಾನೆ. ವಿಡಿಯೋದಲ್ಲಿ ತಾನು ವಿಷ ಖರೀದಿ ಮಾಡಿರುವ ಮೆಡಿಕಲ್​ ಸ್ಟೋರ್​ ಮಾಲೀಕನ ಹೆಸರು ಸಹ ಹೇಳಿದ್ದು, ಆತ ತನಗೆ 1ಲಕ್ಷ ರೂ. ವಂಚನೆ ಮಾಡಿದ್ದಾನೆಂದು ತಿಳಿಸಿದ್ದಾನೆ.

ಈ ವಿಡಿಯೋವನ್ನ ಇಂದಿರಾಪುರಂನಲ್ಲಿ ವಾಸವಾಗಿದ್ದ ಸುಮಿತ್​ ಕುಮಾರ್​ ಸಹೋದರಿ ನೋಡಿ, ಸೋದರಳಿಯ ಪಂಕಜ್​ ಸಿಂಗ್​ಗೆ ತಿಳಿಸಿದ್ದಾಳೆ. ಆತ ಮನೆಗೆ ತೆರಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಪತ್ನಿ ಹಾಗೂ ಮೂವರು ಮಕ್ಕಳು ಸಾವನ್ನಪ್ಪಿರುವ ಮಾಹಿತಿ ತಿಳಿದು ಬಂದಿದೆ.

ವೃತ್ತಿಯಲ್ಲಿ ಸಾಫ್ಟ್​ವೇರ್​ ಎಂಜಿನಿಯರ್​ ಆಗಿದ್ದ ಸುಮಿತ್​ ಕುಮಾರ್​ ಕಳೆದ ಡಿಸೆಂಬರ್​ ತಿಂಗಳಲ್ಲಿ ಕೆಲಸ ಬಿಟ್ಟಿದ್ದನಂತೆ. ಆತನ ಪತ್ನಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಳು. ಸುಮಿತ್​ ಕೆಲಸ ಬಿಟ್ಟ ನಂತರ ಮನೆ ಹಾಗೂ ಮಕ್ಕಳ ಶಿಕ್ಷಣದ ಖರ್ಚು ನೋಡಿಕೊಳ್ಳಲು ಹಣಕಾಸಿನ ತೊಂದರೆ ಉಂಟಾಗಿತ್ತು ಎಂದು ತಿಳಿದು ಬಂದಿದೆ. ಈತನೊಂದಿಗೆ ಪೋಷಕರು ಸಹ ವಾಸವಾಗಿದ್ದರು ಎಂಬ ಮಾಹಿತಿಯನ್ನ ಸ್ಥಳೀಯರು ನೀಡಿದ್ದಾರೆ.

2011ರಲ್ಲಿ ವಿವಾಹವಾಗಿದ್ದ ಈತ ಗುರುಗ್ರಾಮ್​, ನೋಯ್ಡಾ ಹಾಗೂ ಬೆಂಗಳೂರು ಸೇರಿದಂತೆ ಅನೇಕ ಕಡೆ ಸಾಫ್ಟ್​ವೇರ್​ ಎಂಜಿನಿಯರ್ ಆಗಿ ಕೆಲಸ ಮಾಡಿದ್ದನು. ನಂತರ ಘಾಜಿಯಾಬಾದ್​​ನಲ್ಲಿ ಕೆಲಸ ಮಾಡುತ್ತಿದ್ದ ಈತ, ಕಳೆದ ಡಿಸೆಂಬರ್​​ನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದ್ದನು. ಘಟನೆ ನಡೆದ ಬಳಿಕ ಸುಮಿತ್​ ಮೊಬೈಲ್​ ಸ್ವೀಚ್​ ಆಫ್​ ಆಗಿದೆ.

ABOUT THE AUTHOR

...view details